ನವದೆಹಲಿ: ಇತ್ತೀಚೆಗೆ ನಡೆಸಿದ ಸಮೀಕ್ಷೆ ಸಂದರ್ಭ, ಸತ್ಯ ಹೇಳುವುದಾಗಿ ಎದೆಯುಬ್ಬಿಸಿಕೊಂಡು ಬಂದ ಪುರುಷ ಪುಂಗವರು ನೋಡ್ರೀ ಸ್ವಾಮಿ, ನಾವು ಕಡೆಯ ಬಾರಿ ಮಹಿಳೆಯೊಂದಿಗೆ ದೈಹಿಕ ಸಂಪರ್ಕ ನಡೆಸುವಾಗ ಕಾಂಡೋಮ್ ಬಳಸಿದ್ದೇವೆ ಎಂದು ಎದೆ ತಟ್ಟಿ ಸತ್ಯ ಹೇಳಿದ್ದಾರೆ. ವಿಶ್ವದ 37 ರಾಷ್ಟ್ರಗಳಲ್ಲಿ ಈ ಸಮೀಕ್ಷೆ ನಡೆಸಲಾಗಿದ್ದು, ಸುರಕ್ಷಿತ ಲೈಂಗಿಕ ಕ್ರಿಯೆ ನಡೆಸುವ ದೇಶಗಳ ಸಾಲಿನಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಸುರಕ್ಷಿತ ಲೈಂಗಿಕತೆಗೆ ಪುರುಷರು ಅನುಸರಿಸುವ ಕ್ರಮಗಳೇನು, ಲೈಂಗಿಕ ಸಂತೃಪ್ತಿಗಾಗಿ ಏನೇನು ಕಸರತ್ತುಗಳನ್ನು ಮಾಡುತ್ತೀರಿ... ಎಷ್ಟು ಸಮಯ ಏನೇನು ಮಾಡುತ್ತೀರಿ ಎಂಬಂತ ಪ್ರಶ್ನೆಗಳನ್ನು ತಟ್ಟಂತ ಹೇಳಿ ಎಂದು ಕೇಳಲಾಗಿತ್ತು.