ನವದೆಹಲಿ: ದೇಶದಲ್ಲಿನ ಅನಿಲ ಕೊರತೆಯ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಔದ್ಯಮಿಕ ಮಂಡಳಿ ಅಸೋಚಮ್, ಏರುತ್ತಿರುವ ಬೇಡಿಕೆಯನ್ನು ಪೂರೈಸಲು ಸರಕಾರ ಅನಿಲ ಉತ್ಪಾದಕ ರಾಷ್ಟ್ರಗಳ ಜತೆಗಿನ ರಾಜತಾಂತ್ರಿಕ ಮೈತ್ರಿಯನ್ನು ಬಲಗೊಳಿಸಬೇಕು ಎಂದು ಹೇಳಿದೆ. 2015ರ ವೇಳೆಗೆ ಭಾರತದ ಅನಿಲ ಬೇಡಿಕೆ ಸುಮಾರು 120 ಬಿಲಿಯ ಕ್ಯುಬಿಕ್ ಮೀಟರ್ (ಬಿಸಿಎಂ) ಹೋಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಪ್ರಸಕ್ತ, ದೇಶೀಯ ಅನಿಲ ಉತ್ಪಾದನೆ ಬೃಹತ್ ಪ್ರಮಾಣದಲ್ಲಿ ವೃದ್ಧಿಯಾಗುವ ಸಂಭವ ಇಲ್ಲದ ಕಾರಣ ಭಾರತ ಅಧಿಕ ನೈಸರ್ಗಿಕ ಅನಿಲ ಆಮದಿಗೆ ಮೊರೆ ಹೋಗ ಬೇಕಾಗಬಹುದು ಎಂದು ಹೇಳಿರುವ ಅಸೋಚಮ್, 2015ರ ವೇಳೆಗೆ, ಹೆಚ್ಚಿನ ಅನಿಲ ಉತ್ಪಾದನಾ ದೇಶಗಳು ಏಷಿಯಾ ರಾಷ್ಟ್ರಗಳ ನಡುವಿನ ಸರಬರಾಜು ಒಪ್ಪಂದವನ್ನು ಕೊನೆಗೊಳಿಸಲಿದೆ ಎಂದು ತಿಳಿಸಿದೆ.
ಜಪಾನ್ ಮತ್ತು ಕೊರಿಯಾದಂತಹ ದೇಶಗಳೊಂದಿಗಿನ ತನ್ನ ಅನಿಲ ಸರಬರಾಜು ಗುತ್ತಿಗೆಯನ್ನು 2015ರ ವೇಳೆಗೆ ಪೂರ್ಣಗೊಳಿಸಲಿರುವ ಅನಿಲ ಉತ್ಪಾದನಾ ದೇಶಗಳ ಜತೆ ತನ್ನ ರಾಜತಾಂತ್ರಿಕ ಸಂಬಂಧವನ್ನು ಬಲಗೊಳಿಸಲು ಇದು ಭಾರತಕ್ಕೆ ಸೂಕ್ತ ಸಮಯವಾಗಿದೆ ಎಂದು ಸಂಘಟನೆ ಅಭಿಪ್ರಾಯಿಸಿದೆ.
|