ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಜಯವಾಡದಲ್ಲಿ ಬೃಹತ್ ವಿದ್ಯುತ್ ಘಟಕ ಸ್ಥಾಪನೆ
ಕೇಂದ್ರ ಸರಕಾರ ಸ್ವಾಮ್ಯದ ಭಾರತ್ ಹೆವೀ ಎಲೆಕ್ಟ್ರಿಕಲ್ಸ್ (ಬಿಎಚ್ಇಎಲ್) ಸಂಸ್ಥೆಯು ಆಂಧ್ರಪ್ರದೇಶ ವಿದ್ಯುತ್ ಉತ್ಪಾದನಾ ಕಾರ್ಪೊರೇಷನ್ (ಎಪಿಜಿಇಎನ್‌ಸಿಒ) ಜತೆಗೂಡಿ ವಿಜಯವಾಡಾದಲ್ಲಿ ಸಮಗ್ರ ಕಲ್ಲಿದ್ದಲು ಅನಿಲೀಕರಣ ಸಂಯೋಜಿತ ಆವರ್ತ (ಐಜಿಸಿಸಿ) ವಿದ್ಯುತ್ ಸ್ಥಾವರನ್ನು ಸ್ಥಾಪಿಸುವುದಾಗಿ ಸೋಮವಾರದಂದು ತಿಳಿಸಿದೆ.

ಬಿಎಚ್ಇಎಲ್ ಸಂಸ್ಥೆ ಎಪಿಜಿಇಎನ್‌ಸಿಒ ಜತೆ ವಿಜಯವಾಡದಲ್ಲಿ ದೇಶದ ಅತಿ ದೊಡ್ಡ 125 ಮೆಗಾ ವ್ಯಾಟ್ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಲು ತಿಳುವಳಿಕಾ ಪತ್ರಕ್ಕೆ ಸಹಿ ಹಾಕಿದೆ ಎಂದು ಕಂಪೆನಿಯ ಪತ್ರಿಕಾ ಹೇಳಿಕೆ ತಿಳಿಸಿದೆ.

ದೇಶದ ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯನ್ನು ನೀಗಿಸಲು ಬಿಎಚ್ಇಎಲ್ ಅನೇಕ ಉಪಕ್ರಮಗಳಿಗೆ ಮುಂದಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೆ ರವಿ ಕುಮಾರ್ ತಿಳಿಸಿದ್ದಾರೆ.

ಸರಕಾರಿ ಒಡೆತನದ ಈ ಸಂಸ್ಥೆ ವಿಶಾಖಪಟ್ಟಣಂ ಮೂಲದ ಭಾರತ್ ಹೆವೀ ಪ್ಲೇಟ್ ಅಂಡ್ ವೆಸ್ಸೆಲ್ಸ್ (ಬಿಎಚ್‌ಪಿವಿ)ಯನ್ನೂ ಅಧಿಕೃತವಾಗಿ ತನ್ನದಾಗಿಸಿಕೊಂಡಿದೆ. 11ನೇ ಪಂಚವಾರ್ಷಿಕ ಯೋಜನೆ ಕಾಲಾವಧಿಯಲ್ಲಿ ಸಾಮರ್ಥ್ಯ ಹೆಚ್ಚುವರಿ ಗುರಿಗಳನ್ನು ಹೊಂದುವ ವಿಶ್ವಾಸ ತಮ್ಮಲ್ಲಿದೆ ಎಂದು ಕುಮಾರ್ ತಿಳಿಸಿದ್ದಾರೆ.

ಬಿಎಚ್‌ವಿಪಿ ಸಂಸ್ಥೆಯು ಇನ್ನು ಮೂರು ವರ್ಷಗಳಿಗೆ ಸುಮಾರು 236 ಕೋಟಿ ರೂ.ಗಳಷ್ಟು ಬಂಡವಾಳವೆಚ್ಚ ಮಾಡಲಿದ್ದು , ಮಂದಿನ ಐದು ವರ್ಷಗಳಲ್ಲಿ 1,000 ಸಾವಿರ ಕೋಟಿ ವ್ಯವಹಾರನಿರೀಕ್ಷಿಸುತ್ತಿದೆ ಎಂದು ತಿಳಿಸಿದೆ.
ಮತ್ತಷ್ಟು
ರಾಷ್ಟ್ರಕ್ಕೆ ಅನಿಲ ಆಮದು ಆಗತ್ಯ: ಅಸೋಚಮ್
ಐಪಿಪಿ ಸ್ವೀಕಾರಾರ್ಹ ಮಟ್ಟದಲ್ಲಿ: ಅಹ್ಲುವಾಲಿಯಾ
ಹಣದುಬ್ಬರ 6ಶೇ.ಕ್ಕೆ ಕುಸಿಯಲಿದೆ: ರಂಗರಾಜನ್
ಈ ವರ್ಷ ಗೋಧಿ ಆಮದು ಇಲ್ಲ: ಪವಾರ್
ಉಕ್ಕು ರಫ್ತು ಮೇಲೆ ಸುಂಕ
ಬಿಎಚ್ಇಎಲ್‌ನಿಂದ ಬೃಹತ್ ವಿದ್ಯುತ್ ಘಟಕ