ಅಗ್ಗದ ಕಾರು ಎಂದು ಜಗಜ್ಜಾಹಿರುಗೊಂಡ ಭಾರತದಲ್ಲಿ ತಯಾರಾಗುವ ನ್ಯಾನೋ ಕಾರನ್ನು ಅಮೆರಿಕ ಸೇರಿದಂತೆ ಹಲವಾರು ಪ್ರಮುಖ ರಾಷ್ಟ್ರಗಳಿಗೆ ರಫ್ತುಗೊಳಿಸಲಾಗುವುದು ಎಂದು ಟಾಟಾ ಮೋಟಾರ್ಸ್ ಮಂಗಳವಾರದಂದು ತಿಳಿಸಿದೆ.
"ನ್ಯಾನೋ ಕಾರನ್ನು ಯಾವ ದೇಶಕ್ಕೂ ರಫ್ತು ಮಾಡಬಾರದು ಅಂತೇನೂ ಇಲ್ಲ. ಟಾಟಾ ರಫ್ತಿಗೆ ಕೂಡ ಯೋಜನೆಯನ್ನು ಹಾಕಿಕೊಂಡಿದೆ. ಆದರೆ ಟಾಟಾ ನ್ಯಾನೋವನ್ನು ಮೊದಲು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುತ್ತದೆ" ಎಂದು ಟಾಟಾ ಮೊಟಾರ್ಸ್‌ನ ವಕ್ತಾರರು ಹೇಳಿದ್ದಾರೆ.
ಈ ಹೇಳಿಕೆಯು, ಕಾಂಡೇ ನ್ಯಾಸ್ಟ್ ಪೋರ್ಟ್‌ಫೋಲಿಯೋ ವರದಿಯು ನ್ಯಾನೋ ಕಾರನ್ನು ಅಮೇರಿಕಾದಲ್ಲಿ ಮಾರಾಟ ಮಾಡುವುದಿಲ್ಲ ಎನ್ನುವ ವರದಿಯು ಪ್ರಕಟವಾದ ಹಿನ್ನೆಲೆಯಲ್ಲಿಯೇ ಹೊರಬಿದ್ದಿದೆ.
"ಈ ಮಾದರಿಯನ್ನು(ನ್ಯಾನೋ) ಇಲ್ಲಿ ಮಾರಾಟಗೊಳಿಸುವುದಿಲ್ಲ. ಆದರೆ ಇಲ್ಲಿ ಅದಕ್ಕೆ ಬದಲಾಗಿ ಇನ್ನೊಂದು ಕಾರಿನ ಮಾರುಕಟ್ಟೆಯನ್ನು ಸೃಷ್ಟಿಸುವ ಸಾಮರ್ಥ್ಯವಿದೆ" ಎಂದು ವರದಿ ತಿಳಿಸಿದೆ. ರತನ್ ಟಾಟಾರನ್ನು ಜಗತ್ತಿನ 73 ಅತ್ಯುತ್ತಮ ಬುದ್ದಿವಂತರಲ್ಲಿ ಒಬ್ಬರೆಂದು ತಿಳಿಸಿದ ನ್ಯಾಸ್ಟ್ ಪೋರ್ಟ್‌ಫೋಲಿಯೋ, ಟಾಟಾ ಅವರಿಂದ ಸ್ಪೂರ್ತಿ ಪಡೆದ ಕಾರು ಸಂಸ್ಥೆಗಳು ತಮ್ಮ ಇಂಜಿನಿನ ಬದಲಾವಣೆ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ತಿಳಿಸಿದೆ.
ಟಾಟಾ ಮೋಟಾರ್ಸ್ ವಕ್ತಾರರು ಇದೇ ಸಂದರ್ಭದಲ್ಲಿ ಮಾತನಾಡಿ, ದೇಶಿಯ ಮಾರುಕಟ್ಟೆಯಲ್ಲಿ ದೃಢವಾಗಿ ತಳಊರಿದ ಬಳಿಕ ಕಂಪೆನಿಯು ಕಾರು ರಫ್ತಿನತ್ತ ಗಮನ ಹರಿಸುವುದು ಎಂದು ಸ್ಪಷ್ಟಪಡಿಸಿದರು.
|