ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಫ್ತು ಸುಂಕ ಹಿಂತೆಗೆತಕ್ಕೆ ಆಗ್ರಹ
ಉಕ್ಕು ತಯಾರಕರು, ಹಣದುಬ್ಬರದ ನಿಯಂತ್ರಣಕ್ಕಾಗಿ ಉಕ್ಕು ಬೆಲೆಯನ್ನು ಕಡಿಮೆ ಮಾಡಿದ ನಂತರವೂ, ಸರ್ಕಾರ ರಫ್ತು ಸುಂಕ ವಿಧಿಸಿರುವುದಕ್ಕೆ ಉಕ್ಕು ಉದ್ಯಮಿಗಳು ಅಸಮಾಧಾನ ಗೊಂಡಿದ್ದು, ಸುಂಕವನ್ನು ತೊಡೆದುಹಾಕಬೇಕು ಎಂದು ಸರಕಾವನ್ನು ವಿನಂತಿಸಿಕೊಂಡಿದ್ದಾರೆ.

ಉದ್ಯಮಿಗಳ ಮನವಿಯ ಕುರಿತು ಸರಕಾರ ಶೀಘ್ರದಲ್ಲಿಯೇ ನಿರ್ಧಾರ ಕೈಗೊಳ್ಳಲಿದೆ ಎಂದು ವರದಿಗಳು ತಿಳಿಸಿವೆ.

"ರಫ್ತು ಸುಂಕ ಹಿಂತೆಗೆತಕ್ಕಾಗಿ ಉಕ್ಕು ಉದ್ಯಮಿಗಳು ಸಲ್ಲಿಸಿರುವ ಬೇಡಿಕೆಯ ಕುರಿತು , ಸರ್ಕಾರದ ಪರಿಶೀಲನೆ ನಡೆಸುತ್ತಿದ್ದು, ಅದರ ನಿರ್ಧಾರವು ಅತಿಶೀಘ್ರದಲ್ಲಿಯೇ ಹೊರಬೀಳಲಿದೆ" ಎಂದು ಉಕ್ಕು ಕಾರ್ಯದರ್ಶಿ ರಾಘವ್ ಶರಣ್ ತಿಳಿಸಿದರು.

ಈ ಕುರಿತಂತೆ ಸಚಿವಾಲಯದಲ್ಲಿ ಆಂತರಿಕ ಸಮಾಲೋಚನೆ ನಡೆಯುತ್ತಿದ್ದು, ನಿರ್ಧಾರವು ಅತಿ ಶೀಘ್ರದಲ್ಲಿಯೇ ಹೊರಬೀಳಲಿದೆ. ಕಳೆದ ವಾರ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್‌ ಅವರನ್ನು ಭೇಟಿ ಮಾಡಿದ ಬಳಿಕ ಉಕ್ಕುಉದ್ಯಮಿಗಳು ಕಚ್ಚಾ ಉಕ್ಕಿನ ಬೆಲೆಯಲ್ಲಿ ಟನ್‌ ಒಂದರ 4000 ರೂ. ಹಾಗೂ ಸಿದ್ದ ವಸ್ತುಗಳ ಮೇಲೆ ಟನ್ ಒಂದರ 2,000 ಕಡಿಮೆ ಮಾಡಲು ನಿರ್ಧರಿಸಿದ್ದು, ಮುಂಬರುವ ಎರಡ್ಮೂರು ತಿಂಗಳ ಕಾಲ ಇದೇ ಬೆಲೆಯನ್ನು ಕಾಯ್ದುಕೊಳ್ಳುವುದಾಗಿ ಹೇಳಿದ್ದರು.

ಕಬ್ಬಿಣ ಮತ್ತು ಉಕ್ಕಿನ ದರಗಳಲ್ಲಿ ಶೇ.0.1ರಷ್ಟು ಇಳಿಕೆ ಕಂಡು ಬಂದಿದೆ ಎಂದು ಕಳೆದ ವಾರ ಬಿಡುಗಡೆಗೊಂಡ ಹಣದುಬ್ಬರ ಮಾಹಿತಿ ವಿವರ ಅಧಿಕೃತವಾಗಿ ತಿಳಿಸಿದ್ದು, ಇದು ಸರ್ಕಾರಕ್ಕೆ ಒಂದಿಷ್ಟು ಸಮಾಧಾನವನ್ನು ತಂದಿದೆ.
ಮತ್ತಷ್ಟು
ವಿದೇಶಗಳಿಗೂ ಹೋಗಲಿರುವ ಟಾಟಾ 'ನ್ಯಾನೋ'
ಹಣದುಬ್ಬರವನ್ನು ಟೀಕಿಸುವ ಹಕ್ಕು ಬಿಜೆಪಿಗಿಲ್ಲ: ಚಿದು
ವಿಜಯವಾಡದಲ್ಲಿ ಬೃಹತ್ ವಿದ್ಯುತ್ ಘಟಕ ಸ್ಥಾಪನೆ
ರಾಷ್ಟ್ರಕ್ಕೆ ಅನಿಲ ಆಮದು ಆಗತ್ಯ: ಅಸೋಚಮ್
ಐಪಿಪಿ ಸ್ವೀಕಾರಾರ್ಹ ಮಟ್ಟದಲ್ಲಿ: ಅಹ್ಲುವಾಲಿಯಾ
ಹಣದುಬ್ಬರ 6ಶೇ.ಕ್ಕೆ ಕುಸಿಯಲಿದೆ: ರಂಗರಾಜನ್