ನವದೆಹಲಿ: ಬಜಾಜ್ ಆಟೋ, ಫ್ರಾನ್ಸಿನ ರಿನಾಲ್ಟ್ ಮತ್ತು ಜಪಾನಿನ ನಿಸ್ಸಾನ್, 2011ರ ವೇಳೆಗೆ ಭಾರತದಲ್ಲಿ ಸಣ್ಣ ಕಾರೊಂದನ್ನು ಮಾರುಕಟ್ಟೆಗೆ ಪರಿಚಯಿಸಲು ಮುಂದಿನ ತಿಂಗಳು ಅಧಿಕೃತ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ. ಇನ್ನೂ ಹೆಸರಿಡದ ಈ ಕಾರು, ಕಳೆದ ಜನವರಿ ತಿಂಗಳಲ್ಲಿ ನಡೆದ ಆಟೋ ಮೇಳದಲ್ಲಿ ಎಲ್ಲರ ಗಮನ ಸೆಳೆದ ಒಂದು ಲಕ್ಷ ಮೌಲ್ಯದ ಟಾಟಾದ ನ್ಯಾನೋ ಕಾರಿನ ಲಕ್ಷಣಗಳನ್ನು ಒಳಗೊಂಡಿದ್ದು, ಕೇವಲ 2,500 ಡಾಲರ್‌ಗಳಲ್ಲಿ (ಒಂದು ಲಕ್ಷ ರೂಪಾಯಿಗಿಂತ ಸ್ವಲ್ಪ ಅಧಿಕ) ಲಭಿಸುವಂತೆ ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿಯ ಆಪ್ತ ಮೂಲಗಳು ತಿಳಿಸಿವೆ.
ಈ ಮೂರು ಕಂಪನಿಗಳು 2500 ಡಾಲರ್ ಮೊತ್ತದ ಕಾರನ್ನು ಅಭಿವೃದ್ಧಿ ಪಡಿಸಲು, ಉತ್ಪಾದನೆ ಮಾಡಲು ಮತ್ತು ಮಾರಾಟ ಮಾಡುವ ತಮ್ಮ ಇರಾದೆಯನ್ನು ಸೋಮವಾರ ವ್ಯಕ್ತ ಪಡಿಸಿದರು. ಜೆವಿಯು ಕಾರನ್ನು ಸಗಟು ಮಾರಾಟ ದರದಲ್ಲಿ ಅಭಿವೃದ್ದಿ ಪಡಿಸಲಿದೆ ಮತ್ತು ಮಾರಾಟ ಮಾಡಲಿದೆ ಎಂದು ಬಜಾಜ್ ಆಟೋನ ನಿರ್ವಹಣಾ ನಿರ್ದೇಶಕ ರಾಜೀವ್ ಬಜಾಜ್, ರಿನಾಲ್ಟ್ ಅಧ್ಯಕ್ಷ ಮತ್ತು ಸಿಇಒ ಕಾರಲೊಸ್ ಗೊಷನ್ ಮತ್ತು ನಿಸ್ಸಾನ್ ಹೇಳಿದ್ದಾರೆ. ಜೆವಿಯಲ್ಲಿ ಶೇ.50ರಷ್ಟು ಪಾಲುದಾರಿಕೆಯನ್ನು ಬಜಾಜ್ ಹೊಂದಲಿದ್ದು, ಇನ್ನುಳಿದ ಭಾಗವನ್ನು ಸಮನಾಗಿ ರಿನಾಲ್ಟ್ ಮತ್ತು ನಿಸ್ಸಾನ್ ಹೊಂದಲಿದೆ.
ಈ ಕಾರಿನ ಬೆಲೆಯ 2500 ಡಾಲರ್‌ಗಳೆಂದು ನಿರ್ಧರಿಸಲಾಗಿದ್ದು, ಇದು ತೆರಿಗೆ ಮತ್ತು ಇತರೇ ವೆಚ್ಚಗಳನ್ನು ಒಳೊಂಡಿದೆ. ಆದರೆ ವ್ಯಾಟ್, ಆಕ್ಟ್ರಾಯಿ ಕಟ್ಟೆ, ಮಾರಟ ತೆರಿಗೆ ಮತ್ತು ಸ್ಥಳೀಯ ಮುನಿಸಿಪಲ್ ತೆರಿಗೆಯನ್ನು ಹೊರತು ಪಡಿಸಲಾಗಿದೆ. ಈಗ ಪ್ರಕಟಿಸಿರುವ ಬೆಲೆಯು ಕಾರು ಮಾರುಕಟ್ಟೆಗೆ ಪ್ರವೇಶಿಸುವ ತನಕವೂ ಪರಿಣಾಕಾರಿಯಾಗಿರುತ್ತದೆ ಎಂದು ಸಿನ್ಸಾನ್ ವಕ್ತಾರ ಸಿಮೊನ್ ಸ್ಪೌರಲ್ ಹೇಳಿದ್ದಾರೆ.
ತಿಳಿಸಿದರು. ಭವಿಷ್ಯದಲ್ಲಿ ಕಾರು ಉತ್ಪಾದನ ಸಾಮಗ್ರಿಗಳ ಬೆಲೆ ಏರಿಕೆಯಾಗುವ ಸಂಭವವಿರುವುದರಿಂದ ಮತ್ತು ಆಂತರಿಕ ಉತ್ಪಾದನ ವೆಚ್ಚವನ್ನು ದೃಷ್ಠಿಯಲ್ಲಿಟ್ಟುಕೊಂಡು ಕಾರಿನ ಬೆಲೆಯನ್ನು ನಿಗಧಿ ಮಾಡಲಾಗಿದೆ. ಉತ್ಪಾದನಾ ಘಟಕದಿಂದ ಹೊರಕ್ಕೆ ತಗಲುವ ಯಾವುದೇ ತೆರಿಗೆಯ ಹೊರೆಯನ್ನು ಗ್ರಾಹಕರ ಮೇಲೆ ಹೇರಲಾಗುವುದಿಲ್ಲ ಎಂದು ಅವರು ಹೇಳಿದರು.
ಕೆಲವು ಮೂಲಗಳ ಪ್ರಕಾರ ಈ ಕಾರನ್ನು ಪೂನಾದ ಚಕನ್ ಬಳಿ ಸ್ಥಾಪಿಸಲಾಗುವ ಉತ್ಪಾದನಾ ಘಟಕದಲ್ಲಿ ತಯಾರಿಸಲಾಗುವುದು. ಇಲ್ಲಿ, ತನ್ನ ದ್ವಿಚಕ್ರವಾಹನ ಘಟಕದ ಬಳಿ ಬಜಾಬ್ ಸಂಸ್ಥೆಯು 250 ಎಕರೆ ಜಮೀನನ್ನು ಹೊಂದಿದೆ ಎಂದು ಹೇಳಲಾಗಿದೆ.
|