ದೂರ ಸಂಪರ್ಕ ಕ್ಷೇತ್ರದಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದಿರುವ ಭಾರತದ ಟಾಟಾ ಟೆಲೆಸರ್ವೀಸ್ ಸಂಸ್ಥೆಯು ಈ ಹಣಕಾಸು ವರ್ಷದಲ್ಲಿ ದೇಶಾದ್ಯಂತ ಮೊಬೈಲ್ ಮತ್ತು ದೂರ ಸಂಪರ್ಕ ಜಾಲವನ್ನು ರಾಷ್ಟ್ರಾದ್ಯಂತ ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಒಟ್ಟು 606 ಕೋಟಿ ರೂ.ಗಳನ್ನ ಹೂಡಲು ನಿರ್ಧರಿಸಿದೆ.
ಈ ಮೊತ್ತವು, ಅಸ್ಸಾಮ್ ಮತ್ತ ಈಶಾನ್ಯ ಭಾಗದಲ್ಲಿ ತಮ್ಮ ಜಾಲ ವಿಸ್ತರಿಸಲು ಹೂಡುವ ರೂ .209 ಕೋಟಿಗಳನ್ನು ಒಳಗೊಂಡಿದೆ ಎಂದು ಪೂರ್ವ ಪ್ರಾಂತ್ಯದ ಮುಖ್ಯಸ್ಥ ಮತ್ತು ಕೋಲ್ಕತಾ ಸರ್ಕಲ್‌ನ ಸಿಓಓ ರಾಜಿವ್ ಸಿನ್ಹಾ ಬುಧವಾರದಂದು ತಿಳಿಸಿದರು.
ಟಾಟಾ ಇಂಡಿಕಾಂನ ನೂತನ ಫಿಕ್ಸಡ್ ವೈಯರ್‌ಲೆಸ್ ಫೋನ್(ಎಫ್‌ಡಬ್ಲೂಪಿ) ವಾಕಿಟಾಕಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು ಬರುವ ಆಗಸ್ಟ್ 15ರ ವೇಳೆಗೆ ಭಾರತಾದ್ಯಂತ ತನ್ನ ಸಂಸ್ಥೆ ಗುರುತಿಸಿಕೊಳ್ಳಲು ಅಸ್ಸಾಮ್, ಉತ್ತರ-ಪೂರ್ವ ಮತ್ತು ಜಮ್ಮು ಮತ್ತು ಕಾಶ್ಮೀರಗಳಲ್ಲಿ ಸೇವೆಯನ್ನು ಪ್ರಾರಂಭಿಲಿದೆ ಎಂದು ಹೇಳಿದರು.
|