ದುಬೈ ಮೂಲದ ಹಲವಾರು ಕಂಪನಿಗಳು ಇದೀಗಾಗಲೇ ಭಾರತದಲ್ಲಿ ಅನೇಕ ರಿಯಲ್ ಎಸ್ಟೇಟ್ ಮತ್ತು ಮೂಲಭೂತ ಸೌಕರ್ಯಗಳ ಯೋಜನೆಗಳಲ್ಲಿ ಬಿಲಿಯಗಟ್ಟಲೆ ಡಾಲರ್ ಅನ್ನು ಹೂಡಿಕೆ ಮಾಡಿದ್ದು, ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಲ್ಲಿ ಮತ್ತಷ್ಟು ಹೂಡಿಕೆ ನಡೆಸಲು ಉತ್ಸುಕರಾಗಿದ್ದಾರೆ.
ದುಬೈ ಕಂಪನಿಗಳಾದ- ಎಮ್ಮಾರ್, ಲಿಮಿಟ್ಲೆಸ್ ಮತ್ತು ಡಿಪಿ ವರ್ಲ್ಡ್ ಭಾರತದಲ್ಲಿ ಬೃಹತ್ ಕಾರ್ಯಾಚರಣೆ ನಡೆಸುತ್ತಿದ್ದು, ಹಲವಾರು ಯೋಜನೆಗಳನ್ನು ಇಲ್ಲಿ ಕೈಗೊಂಡಿದೆ. ಆದರೆ ಇವು ಈಗ ಏರ್ಪೋರ್ಟ್ ವಲಯದ ಮೂಲಭೂತ ಸೌಕರ್ಯ ಯೋಜನೆಗಳಲ್ಲೂ ತೊಡಗಿಸಲು ಹೆಚ್ಚಿನ ಆಸಕ್ತಿ ತೋರಿವೆ. ಪ್ರಸ್ತುತ ದುಬೈ ಪ್ರವಾಸದಲ್ಲಿರುವ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಪ್ರಣಬ್ ಮುಖರ್ಜಿಯವರಿಗೆ ದುಬೈ ಮೂಲದ ಕಂಪನಿಗಳು ಮಾಡಿರುವ ಪ್ರಸ್ತುತಿಯಲ್ಲಿ, ಕಂಪೆನಿಗಳು ಇನ್ನಷ್ಟೂ ಹೂಡಿಕೆ ನಡೆಸಲು ಆಸಕ್ತವಾಗಿರುವ ವಿಚಾರವನ್ನು ಪ್ರಸ್ತುತ ಪಡಿಸಿದ್ದಾರೆ.
|