ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೆಲೆ ಇಳಿಕೆಗೆ ಬೆಳವಣಿಗೆಯ ತ್ಯಾಗವಿಲ್ಲ: ಅಹ್ಲುವಾಲಿಯ
ಆರ್ಥಿಕತೆಯು ಶೇ.8 ಅಥವಾ ಅದಕ್ಕಿಂತಲೂ ಹೆಚ್ಚಿನ ದರದಲ್ಲಿಯೇ ಮುನ್ನಡೆಯಬೇಕಾದ ಅವಶ್ಯಕತೆ ಇರುವುದರಿಂದ ಹಣದುಬ್ಬರ ದರವನ್ನು ನಿಯಂತ್ರಿಸಲು ಸರ್ಕಾರ ಬೆಳವಣಿಗೆಯನ್ನು ಬಲಿಕೊಡುವುದಿಲ್ಲ ಎಂದು ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಬುಧವಾರ ತಿಳಿಸಿದ್ದಾರೆ.

ಏರುತ್ತಿರುವ ಹಣದುಬ್ಬರವು ಮೂರೂವರೆ ವರ್ಷಗಳಲ್ಲಿಯೇ ಅತ್ಯಧಿಕವಾಗಿದ್ದು, ಏಪ್ರಿಲ್ ಅಂತ್ಯದ ವೇಳೆಗೆ ಅದು ಶೇ.7.61 ತಲುಪಿರುವುದು ಭಾರತಕ್ಕೆ ಯೋಜನಾ ತಲೆನೋವಾಗಿ ಪರಿಣಮಿಸಿದ್ದು ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್ ಬೆಲೆ ಇಳಿಕೆಗೆ ಹಲವಾರು ಕ್ರಮಗಳನ್ನು ಕೈಗೊಳ್ಳುವ ಒತ್ತಡ ಹೇರಿದೆ.

"ನಾವು ಹಣದುಬ್ಬರ ನಿಯಂತ್ರಣಕ್ಕಾಗಿ ಬೆಳವಣಿಗೆಯನ್ನು ಬಲಿಕೊಡುವುದಿಲ್ಲ, ಶೇ.8ರ ಬೆಳವಣಿಗೆ ದರವನ್ನು ಕಾಯ್ದುಕೊಂಡೇ ಹಣದುಬ್ಬರವನ್ನು ನಿಯಂತ್ರಿಸಬೇಕಾದುದು ಬಹಳ ಮುಖ್ಯವಾಗಿದೆ" ಎಂದು ಸಹ ಅವರು ಈ ಸಂದರ್ಭದಲ್ಲಿಯೇ ತಿಳಿಸಿದರು.
ಮತ್ತಷ್ಟು
ಕಾಳಸಂತೆಯಿಂದ ಹಿಂದೆ ಸರಿಯಲು ಸಚಿವರ ಆಗ್ರಹ
ಟಾಟಾ ಟೆಲಿಸರ್ವೀಸ್‌‌ನಿಂದ ರೂ.606 ಕೋಟಿ ಹೂಡಿಕೆ
2011ರ ವೇಳೆಗೆ ಮಾರುಕಟ್ಟೆಯಲ್ಲಿ ಬಜಾಜ್ ಸಣ್ಣ ಕಾರು
ರಫ್ತು ಸುಂಕ ಹಿಂತೆಗೆತಕ್ಕೆ ಆಗ್ರಹ
ವಿದೇಶಗಳಿಗೂ ಹೋಗಲಿರುವ ಟಾಟಾ 'ನ್ಯಾನೋ'
ಹಣದುಬ್ಬರವನ್ನು ಟೀಕಿಸುವ ಹಕ್ಕು ಬಿಜೆಪಿಗಿಲ್ಲ: ಚಿದು