ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಪ್ರೋದಿಂದ ವಿದ್ಯಾರ್ಥಿಗಳಿಗೆ ಕೋಡ್‌ಜ್ಯಾಪ್ ಗುರು ಸ್ಫರ್ಧೆ  Search similar articles
ಭಾರತದ ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪನಿ ವಿಪ್ರೋ ಟೆಕ್ನಾಲಜಿಸ್ ತಮ್ಮ ವಾರ್ಷಿಕ ರಾಷ್ಟ್ರೀಯ ಕೋಡಿಂಗ್ ಸ್ಪರ್ಧೆ 'ಕೊಡ್‌ಜ್ಯಾಪ್ ಗುರು'ಗೆ ಚಾಲನೆ ನೀಡಿದೆ.

ಈ ನಮೂನೆಯಲ್ಲಿ ಇದು ಪ್ರಥಮ ರಾಷ್ಟ್ರೀಯ ಸ್ಪರ್ಧೆಯಾಗಿದ್ದು, ಇದರ ಮೂಲಕ ದೇಶದಾದ್ಯಂತ ವ್ಯಾಸಂಗ ಮಾಡುತ್ತಿರುವ ಪ್ರಮುಖ ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಕೋಡ್‌ಗಳನ್ನು ಬಿಡಿಸುವ ಸಾಮರ್ಥ್ಯ ಹೊಂದಿರುವ ಅತ್ಯಂತ ಬುದ್ಧಿವಂತ ತಲೆಗಳನ್ನು ಒಟ್ಟುಗೂಡಿಸುವ ಗುರಿ ಹೊಂದಿದೆ.

ಕಳೆದ ವರ್ಷ ನಡೆದ 'ಕೋಡ್‌ಜಾಪ್ ಗುರು' ಸ್ಪರ್ಧೆಯ ಯಶಸ್ಸಿನಿಂದಾಗಿ, ಈ ಬಾರಿ ಸ್ಪರ್ಧೆಯಲ್ಲಿ ಬೃಹತ್ ಪ್ರಮಾಣದ ವಿದ್ಯರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ.,ಸ್ಪರ್ಧಾ ವಿಜೇತರಿಗೆ ಲ್ಯಾಪ್ ಟಾಪ್, ಐ-ಪಾಡ್ ಮತ್ತು ಎಲ್‌ಸಿಡಿ ಟಿ.ವಿ.ಗಳೊಳಗೊಂಡ ಆಕರ್ಷಕ ಬಹುಮಾನಗಳನ್ನು ಕಂಪೆ ನೀಡಲಿದೆ.

ಈ ಸ್ಪರ್ಧೆಯ ಪ್ರಥಮ ಸುತ್ತನ್ನು ದೇಶದ ಏಳು ಪ್ರದೇಶಗಳಾದ್ಯಂತ ಆನ್ ಲೈನ್ ಪರೀಕ್ಷೆಯ ಮೂಲಕ ನಡೆಸಲಾಗುವುದು. ಈ ಸ್ಫರ್ಧೆಯಲ್ಲಿ ವಿಜೇತರಾದ ಎಲ್ಲಾ ಪ್ರದೇಶದ ಅಭ್ಯರ್ಥಿಗಳು ಅಂತಿಮ ಸುತ್ತಿಗಾಗಿ ಬೆಂಗಳೂರಿನ ವಿಪ್ರೋ ಕ್ಯಾಂಪಸ್‌ನಲ್ಲಿ ಸೇರಲಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ವಿರಪ್ರೋ ಟೆಕ್ನಾಲಜೀಸ್‌ನ ಪ್ರಧಾನ ವ್ಯವಸ್ಥಾಪಕರಾದ ಪ್ರೀತಿ ರಜೋರಾ ಅವರು ಈ ರೀತಿಯ ಸ್ಪರ್ಧಗಳು ವಿದ್ಯಾರ್ಥಿಗಳಿಗೆ ಮನರಂಜನೆಯೊಂದಿಗೆ ಸಮಸ್ಯೆಗಳನ್ನು ಬಿಡಿಸುವ ರೋಮಾಂಚನ ಉಂಟುಮಾಡುತ್ತದೆ ಸಮಸ್ಯೆಯನ್ನು ಎದುರಿಸಲು ತಾವು ಸಮರ್ಥರೇ ಎಂಬ ಅರಿವು ಅವರಲ್ಲಿ ಮೂಡುತ್ತದೆ ಎಂದು ಹೇಳಿದರು.

ಈ ಸ್ಪರ್ಧೆಯಲ್ಲಿ ಜಯಗಳಿಸಿದವರಿಗೆ ವಿಪ್ರೋವಿನ ನೂತನ ತಂತ್ರಜ್ಞಾನ, ವಿಶೇಷ ಯೋಜನೆ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ತಂಡದೊಡನೆ ಕೆಲಸ ಮಾಡುವ ಅವಕಾಶವನ್ನು ನೀಡಲಾಗುವುದು ಎಂದು ಅವರು ತಿಳಿಸಿದರು.
ಮತ್ತಷ್ಟು
ಬೆಲೆ ಇಳಿಕೆಗೆ ಬೆಳವಣಿಗೆಯ ತ್ಯಾಗವಿಲ್ಲ: ಅಹ್ಲುವಾಲಿಯ
ಭಾರತದ ಮೇಲೆ ದುಬೈ ಕಂಪನಿಗಳ ಕಣ್ಣು
ಕಾಳಸಂತೆಯಿಂದ ಹಿಂದೆ ಸರಿಯಲು ಸಚಿವರ ಆಗ್ರಹ
ಟಾಟಾ ಟೆಲಿಸರ್ವೀಸ್‌‌ನಿಂದ ರೂ.606 ಕೋಟಿ ಹೂಡಿಕೆ
2011ರ ವೇಳೆಗೆ ಮಾರುಕಟ್ಟೆಯಲ್ಲಿ ಬಜಾಜ್ ಸಣ್ಣ ಕಾರು
ರಫ್ತು ಸುಂಕ ಹಿಂತೆಗೆತಕ್ಕೆ ಆಗ್ರಹ