ಕಳೆದ ಮಾರ್ಚ್ ತಿಂಗಳಿಂದ ದೇಶದಲ್ಲಿ ನಿರಂತರವಾಗಿ ಏರುತ್ತಿರುವ ಹಣದುಬ್ಬರಕ್ಕೆ ಸರಕಾರದ ನೀತಿಗಳು ಕಾರಣವಲ್ಲ ಎಂದು ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹುಲ್ ವಾಲಿಯಾ ಹೇಳಿದ್ದಾರೆ.
ಹಾರ್ವರ್ಡ್ ಬಿಜಿನೆಸ್ ಸ್ಕೂಲ್‌ನ ಪ್ರೊಫೆಸರ್ ತರುಣ್ ಖನ್ನಾ ಅವರು ಭಾರತ ಮತ್ತು ಚೀನ ವಾಣಿಜ್ಯೋದ್ಯಮಿಗಳನ್ನು ಕುರಿತು ಬರೆದಿರುವ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಸ್ತುತ ನಾವು ಎದುರಿಸುತ್ತಿರುವ ಹಣದುಬ್ಬರಕ್ಕೆ ಸರಕಾರದ ನೀತಿಗಳು ಕಾರಣವಲ್ಲ ಎಂದು ಹೇಳಿದರು.
ಮಾರ್ಚ್ ತಿಂಗಳ ಬಳಿಕ ಏರುಮುಖ ಕಂಡಿರುವ ಹಣದುಬ್ಬರ, ಏಪ್ರಿಲ್ ತಿಂಗಳಲ್ಲಿ ಬಿಡುಗಡೆಯಾದ ಪಟ್ಟಿಯಲ್ಲಿ, ಕಳೆದ 42 ತಿಂಗಳಲ್ಲಿ ಕಂಡರಿಯದ ಶೇ. 7.61ರ ದರವನ್ನು ದಾಖಲಿಸಿದೆ.
ಹಣದುಬ್ಬರ ನಿಯಂತ್ರಣಕ್ಕೆ ಸರಕಾರ ಕೈಗೊಂಡ ಕ್ರಮಗಳನ್ನು ಪುನರುಚ್ಚರಿಸತ್ತಾ, ಹಣದುಬ್ಬರ ನಿಭಾವಣೆಗೆ ಅತಿಕೆಟ್ಟ ಕ್ರಮಗಳಿವೆ, ಆದರೆ ಸರಕಾರ ಇದನ್ನು ಅನುಸರಿಸಿಲ್ಲ ಎಂದು ನುಡಿದ ಅವರು ಕಳೆದ ಒಂದು ವರ್ಷದಲ್ಲಿ ಉಕ್ಕು ಬೆಲೆಯು ಶೇ. 56ರಷ್ಟು ಹೆಚ್ಚಿದೆ. ಆದ್ದರಿಂದ ಇದರ ಬಗ್ಗೆ ಸರಕಾರದ ಕಳವಳ ತಪ್ಪಲ್ಲ ಎಂದು ನುಡಿದರು.
|