ಭಾರತದ ಮೊಬೈಲ್ ಕಂಪನಿಗಳಲ್ಲಿ ಮುಂಚೂಣಿಯಲ್ಲಿರುವ, ವೊಡಾಫೋನ್ ಎಸ್ಸಾರ್ ಸಂಸ್ಥೆಯು ತನ್ನ ಗ್ರಾಹಕರ ಮೇಲಿನ ದರ ಭಾರವನ್ನು ಕಡಿತ ಮಾಡಿದೆ. ಹೊಸ ದರಪಟ್ಟಿ ಪ್ರಕಾರ, ಬಳಕೆದಾರು ಇನ್ನು ಮುಂದೆ ಭಾರತದ ಯಾವುದೇ ಸ್ಥಳೀಯ ಅಥವ ಎಸ್‌ಟಿಡಿ ಕರೆಗಳನ್ನು ಕೇವಲ ಒಂದು ರೂ.ಗಳಿಗೆ ಕರೆ ಮಾಡಬಹುದಾಗಿದೆ.
ಈ ಸೇವೆಯು ಪ್ರಿಪೇಡ್ ಮತ್ತು ಪೊಸ್ಟ್ ಪೇಡ್ ಎರಡೂ ಗ್ರಾಹಕರಿಗೆ ಲಭ್ಯವಾಗಲಿದ್ದು, ಪ್ರತಿ ತಿಂಗಳಿಗೆ 31 ರೂ.ಗಳನ್ನು ಮಾಸಿಕ ಬಾಡಿಗೆ ತೆರಬೇಕಾಗಿದೆ.
ವೊಡಾಫೋನ್ ಎಸ್ಸಾರ್ ಈಗ 16 ವೃತ್ತಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಶೇ.86ರಷ್ಟು ಭಾರತ ಮೊಬೈಲ್ ಬಳಗೆದಾರರನ್ನು ವ್ಯಾಪಿಸಿದ್ದು, 45.78 ಮಿಲಿಯನ್‌ಗಿಂತ ಹೆಚ್ಚು ಗ್ರಾಹಕರನ್ನು ಹೊಂದಿದೆ.
|