ಸಿಮೆಂಟ್ ಕಂಪನಿಗಳು ಪ್ರತಿ 50 ಕೆ.ಜಿ. ಸಿಮೆಂಟ್ ಚೀಲಕ್ಕೆ ರೂ.3ರಿಂದ ಮತ್ತು 7.5ರ ತನಕ ಕಡಿತಗೊಳಿಸಲು ಒಪ್ಪಿದ ಮರುದಿನವೇ, ಬೆಲೆಯನ್ನು ಇನ್ನಷ್ಟು ತಗ್ಗಿಸಲು ಅವಕಾಶವಿದೆ ಎಂದು ಹಣಕಾಸು ಸಚಿವ ಪಿ. ಚಿದಂಬರಂ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಸಿಮೆಂಟ್ ಬೆಲೆಗಳು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುವ ಸಂಭವವಿದೆ ಎಂಬ ವಿಶ್ವಾಸವಿದೆ ಎಂದು ನುಡಿದರು.
ಸಿಮೆಂಟ್ ಮೇಲೆ ವಿಧಿಸುತ್ತಿರುವ ಅಬಕಾರಿ ಸುಂಕವನ್ನು ಕಡಿತ ಮಾಡಬಕೆಂಬ ಉದ್ಯಮದ ಮನವಿಯನ್ನು ಸರಕಾರ ಪರಿಗಣಿಸಲಿದೆಯೇ ಎಂಬ ಪ್ರಶ್ನೆಗೆ, 'ನನಗೆ ತಿಳಿದಿಲ್ಲ' ಎಂದು ನೇರ ಉತ್ತರ ನೀಡಿದರು.
"ಸಿಮೆಂಟ್ ಕಂಪನಿಗಳು ಬೆಲೆ ಇಳಿಸುವ ಕುರಿತು ಬಗ್ಗೆ ತಮಗೆ ಯಾವುದೇ ರೀತಿಯ ಅಧಿಕೃತ ಮಾಹಿತಿ ಬಂದಿಲ್ಲ. ಆದರೆ ಅವರು ಸಣ್ಣ ಪ್ರಮಾಣದಲ್ಲಿ ಬೆಲೆ ಇಳಿಸಲು ನಿರ್ಧರಿಸಿರುವ ವಿಚಾರ ಪತ್ರಿಕೆಯಲ್ಲಿ ಓದಿದೆ" ಎಂದು ಚಿದಂಬರಂ ಹೇಳಿದರು.
ವಾಣಿಜ್ಯ ಮತ್ತು ಉದ್ಯಮ ಸಚಿವ ಕಮಲ್‌ನಾಥ್ ಸಿಂಗ್ ಜೊತೆ ನಡೆಸಿದ ಸಭೆಯಲ್ಲಿ ಸಿಮೆಂಟ್ ಉತ್ಪಾದಕರು ಕಡಿಮೆ ಪ್ರಮಾಣದಲ್ಲಿ ಬೆಲೆ ಇಳಿಸಲು ನಿರ್ಧರಿಸಿದ್ದಾರೆ.
|