ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಚ್ಚಾತೈಲ ಮೇಲಿನ ಆಮದು ಸುಂಕ ಕಡಿತ ನಿರಾಕರಿಸಿದ ಚಿದು  Search similar articles
ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರಲೊಂದರ 120 ಡಾಲರ್ ಏರಿಕೆಯಾಗಿದ್ದು, ಸರಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ತೀವ್ರ ನಷ್ಟ ಅನುಭವಿಸಲು ಕಾರಣವಾಗಿರುವ ಕಚ್ಚಾ ತೈಲದ ಮೇಲಿನ ಆಮದು ಸುಂಕವನ್ನು ಕಡಿತ ಮಾಡುವ ಸಾಧ್ಯತೆಯನ್ನು ಹಣಕಾಸು ಸಚಿವ ಪಿ.ಚಿದಂಬರಂ ಗುರುವಾರ ತಳ್ಳಿಹಾಕಿದ್ದಾರೆ.

ಸರಕಾರ ಕೆಲವು ಆಹಾರ ವಸ್ತುಗಳ ಮೇಲಿನ ತೆರಿಗೆಯನ್ನು ಕಡಿತ ಮಾಡಿದ ರೀತಿಯಲ್ಲಿ ಕಚ್ಚಾ ತೈಲ ಆಮದಿನ ಮೇಲೆ ತೆರಿಗೆ ಕಡಿತ ಮಾಡಲಿದೆಯೇ ಎಂಬ ಪ್ರಶ್ನೆಗೆ, ಇಲ್ಲ, ಕಚ್ಚಾ ತೈಲ ಆಮದಿನ ಮೇಲಿನ ತೆರಿಗೆ ಕಡಿತ ಮಾಡಿದಲ್ಲಿ ಆಡಳಿತಾತ್ಮಕ ಬೆಲೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು.

ಸರಕಾರದ ಮೇಲಿರುವ ಹೆಚ್ಚು ಹೊರೆಯನ್ನು ಕಚ್ಚಾ ತೈಲ ಬೆಲೆ ಏರಿಕೆಯಿಂದಾಗಿ ಕಡಿಮೆ ಮಾಡಿಕೊಳ್ಳಲು ಸಾಧ್ಯವಿಲ್ಲ, ಈ ನಡುವೆ ಎಡ ಪಕ್ಷದವರು ತೈಲ ಕಂಪನಿಗಳು ತೀವ್ರ ನಷ್ಟ ಅನುಭವಿಸುತ್ತಿರುವುದರಿಂದ ತೆರಿಗೆಯನ್ನು ಕಡಿಮೆ ಮಾಡಲು ಒತ್ತಡ ಹೇರುತ್ತಿದ್ದಾರೆ ಎಂದು ಅವರು ಹೇಳಿದರು.

ಇದುವರೆಗೆ ಸರಕಾರಿ ಸ್ವಾಮ್ಯದ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹೆಚ್‌ಪಿಸಿಎಲ್ ಮತ್ತು ಬಿಪಿಸಿಎಲ್‌ಗೆ ಅಲ್ಪ ಪ್ರಮಾಣದ ಪರಿಹಾರ ನೀಡುತ್ತಿದೆ.

ಈಗಾಗಲೇ ಹಣಕಾಸು ಸಚಿವಾಲಯದಿಂದ ತೈಲ ಕಂಪನಿಗಳಿಗೆ ರೂ. 20,333 ಕೋಟಿಯ ತೈಲ ಬಾಂಡ್‌ಗಳನ್ನು ವಿತರಿಸಿದ್ದು, 2007-08ಸಾಲಿನಲ್ಲಿ ಸುಮಾರು 15000 ಸಾವಿರ ಕೋಟಿಯಷ್ಟು ಹೆಚ್ಚು ಪರಿಹಾರವನ್ನು ನೀಡಲು ಒಪ್ಪಿದೆ ಎಂದು ಸಚಿವರು ತಿಳಿಸಿದರು.
ಮತ್ತಷ್ಟು
ಸಿಮೆಂಟ್ ಬೆಲೆ ಕಡಿತಕ್ಕೆ ಚಿದಂಬರಂ ಒಲವು
ವೊಡಾಫೋನಿಂದ ಎಸ್‌ಟಿಡಿ, ಸ್ಥಳೀಯ ಕರೆಗಳ ದರ ಕಡಿತ
ಹಣದುಬ್ಬರಕ್ಕೆ ಸರಕಾರಿ ನೀತಿ ಕಾರಣವಲ್ಲ: ಮಾಂಟೆಕ್
ವಿಪ್ರೋದಿಂದ ವಿದ್ಯಾರ್ಥಿಗಳಿಗೆ ಕೋಡ್‌ಜ್ಯಾಪ್ ಗುರು ಸ್ಫರ್ಧೆ
ಬೆಲೆ ಇಳಿಕೆಗೆ ಬೆಳವಣಿಗೆಯ ತ್ಯಾಗವಿಲ್ಲ: ಅಹ್ಲುವಾಲಿಯ
ಭಾರತದ ಮೇಲೆ ದುಬೈ ಕಂಪನಿಗಳ ಕಣ್ಣು