ಮತ್ತೊಂದು ಶುಕ್ರವಾರ ಬಂದಿದೆ. ಇದರೊಂದಿಗೆ ಹಣದುಬ್ಬರದ ವರದಿಯೂ ಬಂದಿದೆ. ಮೇ 3ಕ್ಕೆ ಕೊನೆಗೊಂಡ ವಾರದಲ್ಲಿ ದೇಶಿಯ ಅರ್ಥವ್ಯವಸ್ಥೆಯಲ್ಲಿ ಹಣದುಬ್ಬರವು ಶೇ 7-83ಕ್ಕೆ ತಲುಪಿದೆ. ಹಿಂದಿನ ವಾರ ಏಪ್ರಿಲ್ 26ಕ್ಕೆ ಕೊನೆಗೊಂಡ ವಾರದಲ್ಲಿ ಹಣದುಬ್ಬರವು 7.61ಕ್ಕೆ ಇತ್ತು.
ಕಳೆದ ವಾರ ಸಗಟು ದರ ಸೂಚ್ಯಂಕ ಪಟ್ಟಿಯು 42 ತಿಂಗಳುಗಳ ಹಿಂದಿನ ದಾಖಲೆಯನ್ನು ಮುರಿದು ಮುನ್ನುಗ್ಗಿದ್ದು. ಸೂಚ್ಯಂಕ ಪಟ್ಟಿಯಲ್ಲಿ ಏರಿಕೆಗೆ ಅಗತ್ಯ ವಸ್ತುಗಳ ಬೆಲೆಯಲ್ಲಿನ ಹೆಚ್ಚಳ ಕಾರಣ ಎಂದು ವರದಿ ಹೇಳಿದೆ.
ಅಗತ್ಯ ವಸ್ತುಗಳ ಬೆಲೆಯಲ್ಲಿ ಸತತವಾಗಿ ಏರಿಕೆಯಾಗುತ್ತಿರುವ ಕಾರಣ ಹಣದುಬ್ಬರದಲ್ಲಿ ಹೆಚ್ಚಳವಾಗುತ್ತಿದ್ದು, ಸೆಪ್ಟಂಬರ್ 11, 2004ರಲ್ಲಿ ಹಣದುಬ್ಬರದ ಪ್ರಮಾಣವು ಶೇ 7-86ನ್ನು ತಲುಪಿದ್ದು ಗರಿಷ್ಟ ದಾಖಲೆಯಾಗಿತ್ತು.
|