ಈ ಆರ್ಥಿಕ ವರ್ಷದಲ್ಲಿ 2,00,000 ಕೋಟಿ ಕಂದಾಯ ನಷ್ಟ ಅನುಭವಿಸಿರುವ ಹಿನ್ನೆಲೆಯಲ್ಲಿ, ಹೊಸ ಎಲ್‌ಪಿಜಿ ಗ್ಯಾಸ್ ಸಂಪರ್ಕ ನೀಡದಿರಲು ಮತ್ತು ಹಾಲಿ ಇರುವ ಗ್ರಾಹಕರಿಗೆ ಕೋಟಾವನ್ನು ನಿಗದಿ ಪಡಿಸಲು ಸರಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ನಿರ್ಧರಿಸಿವೆ. ಈ ಮೂಲಕ ಲಭ್ಯ ಇರುವ ಸಂಗ್ರಹದ ಮೂಲಕ ಇಕ್ಕೆಡೆಗಳನ್ನು ಸರಿದೂಗಿಸಲು ಅವುಗಳು ಮುಂದಾಗಿವೆ.
ಇಂಡಿಯನ್ ಆಯಿಲ್, ಹಿಂದೂಸ್ತಾನ್ ಪೆಟ್ರೋಲಿಯಂ ಮತ್ತು ಭಾರತ ಪೆಟ್ರೋಲಿಯಂಗಳ ಮಾರುಕಟ್ಟೆ ನಿರ್ದೇಶಕರು, ಪೆಟ್ರೋಲಿಯಂ ಸಚಿವಾಲಯಕ್ಕೆ ನೀಡಿರುವ ಮನವಿಯಲ್ಲಿ ವೆಚ್ಚ ಕಡಿತ ಕ್ರಮಗಳನ್ನು ಸಲಹೆ ಮಾಡಿದ್ದಾರೆ. ಈ ಸಂಸ್ಥೆಗಳು ಪೆಟ್ರೋಲು, ಡೀಸಿಲ್, ಎಲ್‌ಪಿಜಿ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಸೀಮೆಎಣ್ಣೆಯ ಮಾರಾಟದಿಂದಾಗಿ ದಿನವೊಂದರ 550 ಕೋಟಿ ರೂಪಾಯಿ ನಷ್ಟ ಅನುಭವಿಸುತ್ತಿವೆ.
ಕಚ್ಚಾ ತೈಲದ ಬೆಲೆ ಬ್ಯಾರಲೊಂದರ 120 ಡಾಲರ್‌ಗಳಷ್ಟು ಹೆಚ್ಚಿದ್ದರೂ, ಇಂಧನ ಬೆಲೆಯ ಏರಿಕೆಗೆ ಸರಕಾರ ತಡೆಯೊಡ್ಡಿದೆ.
ಪ್ರತಿ ಗ್ಯಾಸ್ ಸಿಲಿಂಡರ್ ಮೇಲೆ ತೈಲ ಕಂಪೆನಿಗಳು 305.90ಪೈಸೆ ನಷ್ಟು ಅನುಭವಿಸುತ್ತಿವೆ. ಈ ವರ್ಷ ತೈಲ ಕಂಪೆನಿಗಳ ನಷ್ಟದ ಪ್ರಮಾಣ 2 ಲಕ್ಷ ಕೋಟಿಗೆ ಏರಿದೆ. ಕಳೆದ ವರ್ಷ 77 ಸಾವಿರ ಕೋಟಿ ರೂಪಾಯಿ ನಷ್ಟ ಅನುಭವಿಸಿತ್ತು.
|