ಭಾರತ ಮತ್ತು ಭೂತಾನ್‌ಗಳ ಜಂಟಿ ಸಹಯೋಗದಲ್ಲಿ ಎರಡು ಬೃಹತ್ ಜಲವಿದ್ಯುತ್ ಯೋಜನೆಗಳನ್ನು ಆರಂಭಿಸುವುದಾಗಿ ಶನಿವಾರ ಘೋಷಿಸಲಾಗಿದೆ.
ಪುನಾಟ್ಸಂಗಚ್ಚು-II ಮತ್ತು ಮಂಗ್ಡೆಚ್ಚು ಎಂಬ ಹೆಸರಿನ ಎರಡು ಜಲವಿದ್ಯುತ್ ಯೋಜನೆಗಳೊಂದಿಗೆ ಇತರ ನಾಲ್ಕು ಇಂತಹ ಯೋಜನೆಗಳ ಕುರಿತ ವಿಸ್ತೃತ ಯೋಜನಾ ವರದಿಗಳ ತಯಾರಿಯನ್ನು ಆರಂಭಿಸುವುದಾಗಿ ಹೇಳಿದೆ.
ಭೂತಾನ್‌ನ ನೂತನ ಸಂಸತ್ತಿನ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡುತ್ತಿದ್ದ ಪ್ರಧಾನಿ ಮನಮೋಹನ್ ಸಿಂಗ್, ಈ ಯೋಜನೆಯ ಮೂಲಕ, 2020ರೊಳಗಾಗಿ ಭೂತಾನ್ ಕನಿಷ್ಠ ಐದು ಸಾವಿರ ಮೆಗಾವ್ಯಾಟ್ ವಿದ್ಯುತ್ತನ್ನು ಭಾರತಕ್ಕೆ ರಫ್ತುಮಾಡಲು ಶಕ್ತವಾಗಲಿದೆ ಎಂದು ನುಡಿದರು.
ಉಭಯ ರಾಷ್ಟ್ರಗಳ ನಡುವೆ ಶುಕ್ರವಾರ ನಡೆದ ಮಾತುಕತೆಯ ವೇಳೆ ಹಮ್ಮಿಕೊಳ್ಳಲಾದ 2020ರ ವೇಳೆಗೆ 10000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಪರಿಷ್ಕೃತ ಗುರಿಯನ್ನು ತಲುಪಲು ಭಾರತವು ಸಾಧ್ಯಇರುವ ಎಲ್ಲವನ್ನೂ ಮಾಡಲಿದೆ ಎಂದು ನುಡಿದರು.
ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಬಳಿಕ ಪ್ರಧಾನಿ ಸಿಂಗ್ ಅವರು ಭಾರತದ ಸಹಕಾರದೊಂದಿಗೆ ನಿರ್ಮಿಸಿದ 1020 ಮೆಗಾವ್ಯಾಟ್ ತಾಲಾ ಹೈಡೆಲ್ ಸ್ಟೇಷನ್ ಅನ್ನು ಭೂತಾನ್‌ಗೆ ಅರ್ಪಿಸಿದರು.
|