ಅನಿಲ್ ಧೀರೂಭಾಯಿ ಅಂಬಾನಿ ಬಳಗದ ರಿಲಯನ್ಸ್ ಬಿಗ್ ಎಂಟರ್ಟೈನ್ಮೆಂಟ್ ಸಂಸ್ಥೆಯು ಮುಂದಿನ ಎರಡು ವರ್ಷಗಳಲ್ಲಿ, ಒಂಭತ್ತು ಭಾಷೆಗಳಲ್ಲಿ 69 ಸಿನಿಮಾಗಳ ನಿರ್ಮಾಣ ಮತ್ತು ವಿತರಣಾ ಒಪ್ಪಂದವನ್ನು ಅಂತಿಮಗೊಳಿಸಿದೆ.
ರಿಲಯನ್ಸ್ನ ಗೃಹ ನಿರ್ಮಾಣ ಮತ್ತು ಇತರ ಪ್ರಮುಖ ನಿರ್ಮಾಣ ಸಂಸ್ಥೆಗಳ ಸಹಯೋಗದೊಂದಿಗಿನ ಸಿನಿಮಾಗಳೂ ಇದರಲ್ಲಿ ಸೇರಿವೆ.
ವಿಧು ವಿನೋದ್ ಚೋಪ್ರಾ ಅವರ ಆಂಗ್ಲ ಭಾಷೆಯ ಬ್ರೋಕನ್ ಹಾರ್ಸಸ್, ಹಾಗೂ ಶಾರೂಖ್ ಖಾನ್ ನಟನೆಯ ಡಾನ್II ಸೇರಿದಂತೆ ಫರಾ ಅಖ್ತರ್ ಹಾಗೂ ರಿತೇಶ್ ಸಿದ್ವಾನಿಯವರ ಎಕ್ಸೆಲ್ ಎಂಟರ್ಟೇನ್ಮೆಂಟ್ನ ಆರು ಸಿನಿಮಾಗಳು ಈ ಒಪ್ಪಂದದಲ್ಲಿ ಸೇರಿದೆ.
ಇದಲ್ಲದೆ,ಶಾಮ್ ಬೆನೆಗಲ್, ಮಧುರ್ ಬಂಡಾರ್ಕರ್, ವಿವೇಕ್ ಅಗ್ನಿಹೋತ್ರಿ ಮತ್ತು ಸುಧೀರ್ ಮಿಶ್ರಾ, ಅಮಿತ್ ಖನ್ನಾ ಅವರುಗಳ ಸಿನಿಮಾವೂ ಸೇರಿದೆ ಎಂದು ಸಂಸ್ಥೆಯ ಹೇಳಿಕೆ ತಿಳಿಸಿದೆ.
|