ಒಂದು ವೇಳೆ ಜೈವಿಕ ಇಂಧನ ಕೃಷಿಯನ್ನು ಜಗತ್ತಿನಾದ್ಯಂತ ಸ್ಥಗಿತಗೊಳಿಸಿದರೆ 2010ರ ಹೊತ್ತಿಗೆ ಆಹಾರ ಧಾನ್ಯಗಳ ಬೆಲೆಯಲ್ಲಿ ಶೇ 20 ರಷ್ಟು ಇಳಿಕೆ ಕಾಣಬಹುದು ಎಂದು ಅಮೆರಿಕ ಮೂಲದ ತಜ್ಞರು ಅದ್ಯಯನ ವರದಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಆಹಾರ ಧಾನ್ಯಗಳ ಕೃಷಿಗೆ ಬಳಕೆಯಾಗುವ ಕೃಷಿ ಭೂಮಿಯನ್ನು ಆಹಾರ ಧಾನ್ಯಗಳ ಉತ್ಪಾದನೆಗೆ ಬಳಸಿದರೆ 2010ರ ಹೊತ್ತಿಗೆ ಆಹಾರ ಧಾನ್ಯಗಳ ಬೆಲೆಯಲ್ಲಿ ಗಮನಾರ್ಹ ಇಳಿಕೆ ಕಂಡು ಬರಬಹುದು. ಉದಾ ಗೋದಿಯ ಬೆಲೆಯಲ್ಲಿ ಶೇ 8, ಸಕ್ಕರೆ ಬೆಲೆಯಲ್ಲಿ ಶೇ 12, ಇಳಿಕೆ ಕಂಡು ಬರುತ್ತದೆ ಎಂದು ಅಂತಾರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆಯು ವರದಿಯಲ್ಲಿ ಹೇಳಿದೆ.
ಜೈವಿಕ ಇಂಧನದ ಕೃಷಿಯ ಕಾರಣ ಗೋದಿಯ ಬೆಲೆಯಲ್ಲಿ ಶೇ 22 ರಷ್ಟು ಏರಿಕೆಯಾಗಿದೆ. ಗೋದಿ ಉತ್ಪಾದನೆಯಲ್ಲಿ ಪ್ರಮುಖ ರಾಷ್ಟ್ರವಾದ ಆಸ್ಟ್ರೇಲಿಯದಲ್ಲಿನ ಬರ ಪರಿಸ್ಥಿತಿ ಮತ್ತು ಸರಕಾರದ ತಪ್ಪು ಕೃಷಿ ನೀತಿಗಳು ಆಹಾರದ ಕೊರೆತೆಗೆ ಕಾರಣವಾಗಿವೆ ಎಂದು ವರದಿ ಹೇಳಿದೆ.
|