ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಯಾಹೂವಿಗೆ ಮೈಕ್ರೋಸಾಫ್ಟ್ ಹೊಸ ಪ್ರಸ್ತಾಪ  Search similar articles
ಯಾಹೂ ಕಂಪೆನಿಯ ಸಂಪೂರ್ಣ ಖರೀದಿಯ ಹೊರತಾದ ಹೊಸ ವ್ಯವಹಾರದ ಪ್ರಸ್ತಾಪವೊಂದನ್ನು ಯಾಹೂ ಮುಂದೆ ಇಟ್ಟಿರುವುದಾಗಿ ಐಟಿ ದಿಗ್ಗಜ ಮೈಕ್ರೋಸಾಫ್ಟ್ ಕಂಪೆನಿ ಹೇಳಿದೆ.

ಯಾಹೂವಿನೊಂದಿಗೆ ವ್ಯವಹಾರ ಇರುವ ಆದರೆ, ಯಾಹೂವಿನ ಸಂಪೂರ್ಣ ಖರೀದಿಯಿಂದ ಹೊರತಾದ ಬದಲೀ ಪ್ರಸ್ತಾಪವೊಂದನ್ನು ಮೈಕ್ರೋಸಾಫ್ಟ್ ಪರಿಗಣಿಸುತ್ತಿದೆ ಮತ್ತು ಯಾಹೂವಿನೊಂದಿಗೆ ಪ್ರಸ್ತಾಪಿಸಿದೆ ಎಂದು ಮೈಕ್ರೊಸಾಫ್ಟ್ ತನ್ನ ಸಂಕ್ಷಿಪ್ತ ಹೇಳಿಕೆಯಲ್ಲಿ ಭಾನುವಾರ ತಿಳಿಸಿದೆ.

ಜುಲೈ 3ರಂದು ನಡೆಯಲಿರುವ ಯಾಹೂವಿನ ಪಾಲುದಾರರ ಸಭೆಯಲ್ಲಿ, ಯಾಹೂ ಮಂಡಳಿಯ ಮೇಲಿನ ತನ್ನ ನಿಯಂತ್ರಣವನ್ನು ಕಸಿದುಕೊಳ್ಳಲು ಪ್ರಾಕ್ಸಿ ಹೋರಾಟವನ್ನು ಯಾಹೂವಿನ ಪಾಲುದಾರ ಮತ್ತು ಬಿಲಿಯಾಧಿಪತಿ ಕಾರ್ಲ್ ಇಕಾನ್ ಆರಂಭಿಸುತ್ತಿರುವ ಸಂದರ್ಭದಲ್ಲೇ, ಈ ಘೋಷಣೆ ಹೊರಬಿದ್ದಿದೆ.

ಯಾಹೂ ಖರೀದಿಗಾಗಿ, ಮೈಕ್ರೋ ಸಾಫ್ಟ್ ಈ ಹಿಂದೆ ಇಟ್ಟಿದ್ದ್ ಪ್ರಸ್ತಾಪದಲ್ಲಿ ಉಭಯ ಬಣಗಳ ನಡುವೆ ದರ ನಿಗದಿಯಲ್ಲಿ ಒಮ್ಮತ ಮೂಡದ ಕಾರಣ ಮಾತುಕತೆ ಕುಸಿದು ಬಿದ್ದಿದ್ದು, ಖರೀದಿ ಪ್ರಸ್ತಾಪದಿಂದ ಮೈಕ್ರೋಸಾಫ್ಟ್ ಹಿಂದೆ ಸರಿದಿತ್ತು. ಶೇರೊಂದರ 33 ಡಾಲರ್ ಪ್ರಸ್ತಾಪಕ್ಕೆ ಯಾಹೂ ನಕಾರ ಸೂಚಿಸಿತ್ತು.

ಮೈಕ್ರೋಸಾಫ್ಟ್‌ನ ಪ್ರಸ್ತಾಪ ತಿರಸ್ಕರಿಸಿರುವ ಯಾಹೂ ಕ್ರಮವನ್ನು ಇಕಾನ್ ಅವರು ವಿವೇಚನಾ ರಹಿತವಾದದ್ದು
ಎಂದು ಕರೆದಿದ್ದು, ಮಾತುಕತೆ ಮೇಜಿಗೆ ಮರಳುವಂತೆ ಯಾಹೂವನ್ನು ಒತ್ತಾಯಿಸುವುದಾಗಿ ಹೇಳಿದ್ದಾರೆ.

ಹೊಸ ಪ್ರಸ್ತಾಪದ ಕುರಿತು ಮೈಕ್ರೋಸಾಫ್ಟ್ ಹೆಚ್ಚಿನ ವಿವರಣೆ ನೀಡಿಲ್ಲ.
ಮತ್ತಷ್ಟು
ಆಹಾರ ಬೆಲೆಗಳ ಹೆಚ್ಚಳಕ್ಕೆ ಜೈವಿಕ ಇಂಧನ ಕಾರಣ
ರಿಲಯನ್ಸ್‌ನಿಂದ ಮುಂದಿನ 2 ವರ್ಷಗಳಲ್ಲಿ 69 ಸಿನಿಮಾ
ಹೋಂಡಾ ಅಕಾರ್ಡಿನ ಹೊಸ ಮಾದರಿ ಬಿಡುಗಡೆ
ದುಭಾರಿಯಾದ ಚಿನ್ನ, ಬೆಳ್ಳಿ
ಭಾರತ-ಭೂತಾನ್‌ನಿಂದ 2 ಬೃಹತ್ ಜಲವಿದ್ಯುತ್ ಯೋಜನೆ
ಇನ್ನು ಹೊಸ ಎಲ್‌ಪಿಜಿ ಸಂಪರ್ಕ ಇಲ್ಲ