ರಾಷ್ಟ್ರದಲ್ಲಿ ಹೆಚ್ಚುತ್ತಿರುವ ಆಹಾರ ಧಾನ್ಯ ಬೇಡಿಕೆಯ ಸೂಕ್ತ ಪೂರೈಕೆಗಾಗಿ ಇನ್ನೊಂದು ಹಸಿರು ಕ್ರಾಂತಿಯನ್ನು ಸಾಧಿಸುವ ಕುರಿತು ಗಂಭೀರ ಚಿಂತೆ ಮಾಡಬೇಕಾಗಿದೆ ಎಂದು ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟಗಳ ಮಹಾಸಂಸ್ಥೆ ಅಸೋಚಂ ಆಭಿಪ್ರಾಯಿಸಿದೆ.
"ದೇಶದಲ್ಲಿ ಆಹಾರ ಉತ್ಪಾದನೆ ಸ್ಥಿರಗೊಂಡಿದೆ. ಜ್ಞಾನಾಧಾರಿತ ಕೃಷಿಯ ಆಧಾರದಲ್ಲಿ ಇನ್ನೊಂದು ಹಸಿರುಕ್ರಾಂತಿಯನ್ನು ಸಾಧಿಸಬೇಕಾಗಿದೆ, ದೇಶದಲ್ಲಿ ಪ್ರತಿವರ್ಷ ಜನಸಂಖ್ಯೆಗೆ ಎರಡು ಕೋಟಿ ಜನತೆಯ ಸೇರ್ಪಡೆಯಾಗುತ್ತಿದೆ. ಆದರೆ ಆಹಾರ ಉತ್ಪಾದನೆಯಲ್ಲಿ ಕುಸಿತ ಕಾಣುತ್ತಿದೆ" ಎಂದು ಸಂಘಟನೆಯ ಅಧ್ಯಕ್ಷ ವೇಣುಗೋಪಾಲ್ ಎನ್.ಧೂತ್ ಕಳವಳ ವ್ಯಕ್ತಪಡಿಸಿದ್ದಾರೆ.
'ಭಾರತದಲ್ಲಿ ಹಣದುಬ್ಬರ ಮತ್ತು ವಿಶ್ಲೇಷಣೆ' ವರದಿ ಬಿಡುಗಡೆಗೊಳಿಸಿ ಮಾತನಾಡುತ್ತಿದ್ದ ಅವರು ಭವಿಷ್ಯದಲ್ಲಿ ಹೆಚ್ಚುವ ಆಹಾರಧಾನ್ಯದ ಬೇಡಿಕೆಯನ್ನು ಪೂರೈಕೆ ಮಾಡುವುದು ದುಸ್ತರವಾಗಲಿದ್ದು, ಇನ್ನೊಂದು ಹಸಿರು ಕ್ರಾಂತಿ ಸಾಧಿಸುವ ಕುರಿತು ಗಂಭೀರ ಆಲೋಚನೆ ಮಾಡಬೇಕಾಗಿದೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
|