ಇಲ್ಲಿಗೆ ಸಮೀಪದ ಮೈಹಾರ್ ಪ್ರದೇಶದಲ್ಲಿ ಸುಮಾರು 10 ಎಕರೆಗಳಷ್ಟು ಹಬ್ಬಿದ್ದ ವಿಳ್ಯದೆಲೆ ನಿಗಮವು ಬೆಂಕಿಗಾಹುತಿಯಾಗಿದೆ ಎಂದು ಸೋಮವಾರ ಪೊಲೀಸರು ತಿಳಿಸಿದ್ದಾರೆ.
ಬೆಂಕಿ ಅನಾಹುತದಿಂದಾಗಿ ಸುಮಾರು 12ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ ಎಂದು ತಹಶೀಲ್ದಾರ್ ಎಸ್.ಎನ್. ಮಿಶ್ರಾ ತಿಳಿಸಿದ್ದಾರೆ. ಕಳೆದ ಸಾಯಂಕಾಲ ಈ ಅನಾಹುತ ಸಂಭವಿಸಿದ್ದು, ನಾಲ್ಕುಗಂಟೆಗಳೊಳಗಾಗಿ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ.
ಆಕಸ್ಮಿಕದ ವೇಳೆ 30ಕ್ಕಿಂತಲೂ ಅಧಿಕ ರೈತರು ಹಾನಿಗೀಡಾಗಿದ್ದಾರೆ ಎಂದು ಮಿಶ್ರಾ ಹೇಳಿದ್ದಾರೆ.
ಈ ಅಪಘಾತಕ್ಕೆ ಕಾರಣವೇನು ಎಂದು ತಿಳಿದು ಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
|