ಭಾರತೀಯ ಉದ್ಯಮಗಳಲ್ಲಿ ಉದ್ಯೋಗ ಹೊಂದಿರುವವರಲ್ಲಿ ಹತ್ತಿರಹತ್ತಿರ ಅರ್ಧದಷ್ಟು ಮಂದಿ ಅಧಿಕ ತೂಕ ಹಾಗೂ ಶೇ.27ರಷ್ಚು ಮಂದಿ ಹೈಪರ್‌ಟೆನ್ಷನ್‌ನಿಂದ ಬಳಲುತ್ತಿದ್ದಾರೆ ಎಂದು ಅಧ್ಯಯನ ಒಂದು ತಿಳಿಸಿದೆ.
ವಿಶ್ವ ಆರೋಗ್ಯ ಸಂಘಟನೆಯು ಕಾರ್ಯಸ್ಥಳದ ಆರೋಗ್ಯ ಸಮಸ್ಯೆಗಳನ್ನು ಕಂಡುಹಿಡಿಯಲು ನಡೆಸಿದ ಸಮೀಕ್ಷೆಯಿಂದ ಈ ವಿಚಾರ ಹೊರಬಿದ್ದಿದೆ. ಶೇ.27ರಷ್ಟು ಮಂದಿ ಹೈಪರ್‌ಟೆನ್ಷನ್‌ನಿಂದ ಬಳಲಿದರೆ, ಶೇ10.1 ಪ್ರಮಾಣದ ಮಂದಿ ಮಧುಮೇಹದಿಂದ ಮತ್ತು ಶೇ.47ರಷ್ಟು ಮಂದಿ ಬೊಜ್ಜಿನ ಸಮಸ್ಯೆಯಿದ ಬಳಲುತ್ತಿದ್ದಾರೆ ಎಂದು ಸಮೀಕ್ಷೆ ಹೇಳಿದೆ.
ನಗರ ಪ್ರದೇಶದಲ್ಲಿನ ಕೈಗಾರಿಕಾ ಕಾರ್ಯಸ್ಥಾನಗಳಲ್ಲಿ ಕೆಲಸಮಾಡಿರುವವರು ಹೆಚ್ಚಾಗಿ ಈ ಸಮಸ್ಯೆಗಳಿಗೆ ಒಳಗಾಗುತ್ತಾರೆ.
ಭಾರತದ 10 ವಿವಿಧ ಕೈಗಾರಿಕೆಗಳಲ್ಲಿ ಕಾರ್ಯವೆಸಗುತ್ತಿರುವ 35 ಸಾವಿರಕ್ಕೂ ಅಧಿಕ 10-69ರ ವಯೋಮಾನದ ಸಿಬ್ಬಂದಿಗಳು ಮತ್ತು ಅವರ ಕುಟುಂಬದ ಸದಸ್ಯರು ಹಾಗೂ ಯಾದೃಚ್ಛಿಕ ಮಾದರಿಯಲ್ಲಿ ಆಯ್ಕೆ ಮಾಡಿದ 20 ಸಾವಿರ ಮಂದಿಯನ್ನು ಅಧ್ಯಯನಕ್ಕೆ ಬಳಸಲಾಗಿತ್ತು.
ಈ ಸಮೀಕ್ಷೆಯು ಪಥ್ಯ ಮತ್ತು ದೈಹಿಕ ಚಟುವಟಿಕೆಗಳ ಮೂಲಕ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಕುರಿತ ವರದಿಯ ಅಂಗವಾಗಿದೆ. ಈ ವರದಿಯನ್ನು ಜಿನೇವಾದಲ್ಲಿ ಸೋಮವಾರ ನಡೆದ ವಿಶ್ವ ಆರೋಗ್ಯ ಅಧಿವೇಶನದಲ್ಲಿ ಮಂಡಿಸಲಾಗಿದೆ.
ವಿಶ್ವ ಆರೋಗ್ಯ ಸಂಸ್ಥೆ ಹಾಗೂ ವಿಶ್ವ ಆರ್ಥಿಕ ವೇದಿಕೆಯು ಜಂಟಿಯಾಗಿ ಹಮ್ಮಿಕೊಳ್ಳಲಾಗಿದ್ದ ಪಥ್ಯ ಮತ್ತು ದೈಹಿಕ ಚಟುವಟಿಕೆಗಳ ಮೂಲಕ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಮತ್ತು ಕಾರ್ಯಸ್ಥಾನಗಳಲ್ಲಿನ ವಿವಿಧ ಸಮಸ್ಯೆಗಳ ಕುರಿತ ಕಾರ್ಯಕ್ರಮದಂಗವಾಗಿ ಈ ವರದಿ ತಯಾರಿಸಲಾಗಿದೆ.
|