ವಿಶ್ವಾದ್ಯಂತ ಜೈವಿಕ ಉತ್ಪಾದನೆಯನ್ನು ಪೂರ್ಣವಾಗಿ ನಿಲ್ಲಿಸಿದಲ್ಲಿ ಮುಂಬರುವ 2010ರವೇಳೆಗೆ ಅಹಾರ ಧಾನ್ಯಗಳ ಬೆಲೆಗಳಲ್ಲಿ ಶೇ.20ರಷ್ಟು ಇಳಿಕೆಯಾಗುವ ಸಾಧ್ಯತೆಗಳಿವೆ ಎಂದು ಅಮೆರಿಕದ ಚಿಂತಕರ ಚಿಲುಮೆಯೊಂದು ತನ್ನ ವರದಿಯಲ್ಲಿ ಪ್ರಕಟಿಸಿದೆ.
2007ರ ನಂತರ ಅಹಾರ ಬೆಳೆಗಳಲ್ಲಿ ಜೈವಿಕ ಉತ್ಪಾದನಾ ಬೇಡಿಕೆಯನ್ನು ರದ್ದುಗೊಳಿಸಲಾಗಿದ್ದು ಮುಂಬರುವ 2010ರ ವೇಳೆಗೆ ಅಹಾರ ದರಗಳು ಶೇ.20ರಷ್ಟು ಇಳಿಕೆಯಾಗಲಿದ್ದು, ಗೋಧಿ ಹಾಗೂ ಸಕ್ಕರೆಯ ಬೆಲೆಗಳಲ್ಲಿ ಅನುಕ್ರಮವಾಗಿ, ಶೇ.8 ಹಾಗೂ ಶೇ.12ರಷ್ಟು ಇಳಿಕೆಯಾಗಬಹುದು ಎಂದು ಅಂತಾರಾಷ್ಟ್ರೀಯ ಅಹಾರ ನೀತಿಯ ಸಂಶೋಧನಾ ಸಂಸ್ಥೆಯ ವರದಿಯಲ್ಲಿ ಹೇಳಲಾಗಿದೆ.
ಗೋಧಿ ಹಾಗೂ ಭತ್ತವನ್ನು ಬೆಳೆಯುವ ರಾಷ್ಟ್ರಗಳಾದ ಆಸ್ಟ್ರೇಲಿಯಾದಲ್ಲಿ ಕೆಟ್ಟ ಹವಾಮಾನ ಹಾಗೂ ತೈಲ ದರ ಹೆಚ್ಚಳ ಮತ್ತು ಸರಕಾರದ ಅಸಮರ್ಪಕ ನೀತಿಗಳಿಂದಾಗಿ ಬಿಕ್ಕಟ್ಟು ಎದುರಿಸಬೇಕಾಗಿದ್ದು, ಇದರಿಂದಾಗಿ ಗೋಧಿ ಮತ್ತು ಭತ್ತದಲ್ಲಿ ಶೇ 22ರಷ್ಟು ಹೆಚ್ಚಳವಾಗಿದೆ ಎಂದು ಮೂಲಗಳು ಹೇಳಿವೆ.
|