ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
129 ಡಾಲರ್ ಮೀರಿದ ತೈಲ ಬೆಲೆ  Search similar articles
ಇರಾನ್‌ನೊಂದಿಗೆ ಅಮೆರಿಕದ ಉದ್ವಗ್ನತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಊಹಾಪೋಹದ ಜ್ವರ ಏರಿದ್ದು, ತೈಲಬೆಲೆಯು ಬ್ಯಾರಲೊಂದರ 129 ಡಾಲರ್‌ಗಿಂತಲೂ ಮೇಲೇರಿ ದಾಖಲೆ ನಿರ್ಮಿಸಿದೆ. ಜಾಗತಿಕ ಪೂರೈಕೆಯು ಬಿಗಿಗೊಂಡು, ಬೇಡಿಕೆಯಲ್ಲಿ ಹೆಚ್ಚಳದ ಊಹೆಯು ಬೆಲೆಯನ್ನು ಏರುಮುಖಿಯಾಗಿಸಿದೆ.

ಮಂಗಳವಾರದ ವಹಿವಾಟಿನಲ್ಲಿ ಜೂನ್‌ನಲ್ಲಿ ಪೂರೈಕೆಯ ನ್ಯೂಯಾರ್ಕಿನ ಪ್ರಮುಖ ಕಚ್ಚಾತೈಲದ ಗುತ್ತಿಗೆಯು ಬ್ಯಾರಲೊಂದರ 129.60 ಡಾಲರ್ ತನಕ ಏರಿತ್ತು. ಬಳಿಕ 129.02ರಲ್ಲಿ ಮುಕ್ತಾಯವಾಯಿತಾದರೂ, ಸೋಮವಾರದ ವಹಿವಾಟು ಅಂತ್ಯದ ಬೆಲೆಗಿಂತ 2.02ಡಾಲರ್ ಹೆಚ್ಚು ದಾಖಲಾಗಿದೆ.

ಜೂನ್ ಪೂರೈಕೆಗಾಗಿ ಲಂಡನ್‌ನ ಬ್ರೆಂಟ್ ಕಚ್ಚಾತೈಲ ಗುತ್ತಿಗೆಯು 2.78 ನಷ್ಟು ಏರಿತ್ತು. ಸಾರ್ವಕಾಲಿಕ ಗರಿಷ್ಠ ದರ 128.07 ತಲುಪಿದ ಬಳಿಕ 127.84ರಲ್ಲಿ ಸ್ಥಿರವಾಯಿತು.

ಇರಾನ್ ಹಾಗೂ ಅಮೆರಿಕದ ನಡುವಿನ ಉದ್ವಿಗ್ನತೆಯು ತೈಲ ಶ್ರೀಮಂತ ಮಧ್ಯಪ್ರಾಚ್ಯದ ತೈಲ ಪೂರೈಕೆಯ ಮೇಲೆ ಪರಿಣಾಮ ಬೀರಬಹುದು ಎಂಬ ಭೀತಿಯು ದರ ಏರಿಕೆಗೆ ಕಾರಣ ಎಂದು ವಚೋವಿಯ ಶೇರು ತಜ್ಞ ಎರಿಕ್ ವಿಟ್ಟೆನುವಾರ್ ಹೇಳಿದ್ದಾರೆ.
ಮತ್ತಷ್ಟು
2010ರ ವೇಳೆಗೆ ಆಹಾರ ಧಾನ್ಯಗಳ ಬೆಲೆ ಇಳಿಕೆ
ಶೈಕ್ಷಣಿಕ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಕಣ್ಣು
ಅಕ್ಕಿ ಕೊರತೆ: ಸಹಾಯ ಕೋರಿದ ಸೌದಿ
ಅರ್ಧದಷ್ಟು ಭಾರತೀಯ ಸಿಬ್ಬಂದಿಗಳಿಗೆ ಬೊಜ್ಜು
ಎಸ್‌ಬಿಐನಿಂದ ಕೃಷಿಸಾಲ ಸ್ಥಗಿತ
12 ಲಕ್ಷ ಮೌಲ್ಯದ ವೀಳ್ಯದೆಲೆ ಬೆಂಕಿಗಾಹುತಿ