ಭಾರತೀಯ ರೈಲ್ವೇ ಜತೆಗಿನ ಗುತ್ತಿಗೆ ಕುರಿತು ಧ್ವನಿಎತ್ತರಿಸಿರುವ ಅಲ್‌ಸ್ಟೋಮ್, ಸುಧಾರಿತ ರೈಲ್ವೇ ಎಂಜಿನ್ನುಗಳನ್ನು, ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆಯೇ ಕಡಿಮೆ ದರದಲ್ಲಿ ಪೂರೈಸುವುದಾಗಿ ಬುಧವಾರ ಹೇಳಿದೆ.
ಯೂರೋಪಿನ ಪ್ರಮುಖ ಸಾರಿಗೆ ಪೂರೈಕೆದಾರ ಸಂಸ್ಥೆಯಾಗಿರುವ ಅಲ್‌ಸ್ಟೋಮ್, "ತಾವು ಭಾರತದ ಗುರಿಹೊಂದಿದ್ದೇವೆ. ಒಂದುಸಾವಿರ ವಿದ್ಯುತ್ ರೈಲ್ವೇ ಎಂಜಿನ್ನುಗಳಿಗೆ ಭಾರತೀಯ ರೈಲ್ವೇ ಸದ್ಯವೇ ಕರೆಯಲಿರುವ ಟೆಂಡರ್‌ನಲ್ಲಿ ನಾವು ಭಾಗವಹಿಸಲಿದ್ದೇವೆ. ಇತರ ಕಂಪೆನಿಗಳಿಗಿಂತ ಶೇ.10ರಷ್ಟು ಕಡಿಮೆ ದರವನ್ನು ನಾವು ಮಂಡಿಸಲಿದ್ದೇವೆ" ಎಂದು ಹೇಳಿದೆ.
ಕಂಪೆನಿಯು ಬುಧವಾರ, ಅತಿವೇಗದ ಸುಧಾರಿತ ಮಾದರಿಯ ಪ್ರೈಮ್ II ಲೋಕೊಮೋಟೀವ್‌ಗಳ ಅನಾವರಣ ಮಾಡಿತು. ಕಾರ್ಯಕ್ಷಮತೆ ಮತ್ತು ಬೆಲೆಯ ಬಗ್ಗೆ ಸಮತೋಲನ ಸಾಧಿಸುವ ಮೂಲಕ ಗುಣಮಟ್ಟಕ್ಕೆ ಧಕ್ಕಿಯಾಗದಂತೆ ಉತ್ಪನ್ನವನ್ನು ನೀಡುವುದಾಗಿ ಅಲ್‌ಸ್ಟೋಮ್ ಸಂಸ್ಥೆ ಹೇಳಿದೆ.
|