ತೈಲ ಬೆಲೆಗಳು ಆಕಾಶಕ್ಕೆ ತಲುಪಿರುವ ಹಿನ್ನೆಲೆಯಲ್ಲಿ, ಅಮೆರಿಕದ ನ್ಯಾಯಾಲಯಗಳಲ್ಲಿ ಪೆಟ್ರೋಲಿಯಂ ರಫ್ತು ರಾಷ್ಟ್ರಗಳ ಸಂಘಟನೆ (ಒಪೆಕ್) ವಿರುದ್ಧ ಮೊಕದ್ದಮೆ ಹೂಡಲು ಫೆಡರಲ್ ಸರಕಾರಕ್ಕೆ ಅಧಿಕಾರ ನೀಡುವ ಶಾಸನವನ್ನು ಅಮೆರಿಕದ ಪ್ರತಿನಿಧಿಗಳ ಸದನವು ಮಂಗಳವಾರ ಪಾಸು ಮಾಡಿದೆ.
ತೈಲ ಬೆಲೆಯು ಬ್ಯಾರಲೊಂದರ 129 ಡಾಲರ್‌ಗಳಷ್ಟು ಏರಿಕೆಯಾಗಿರುವ ಮಂಗಳವಾರದಂದೆ, ಈ ಮಸೂದೆಯನ್ನು ಡೆಮಾಕ್ರೆಟಿಕ್ ನೇತೃತ್ವದ ಸದನದಲ್ಲಿ 324:80 ಮತಗಳ ಅಂತರದಿಂದ ಪಾಸುಮಾಡಲಾಗಿದೆ.
ಒಪೆಕ್ ರಾಷ್ಟ್ರಗಳು ವಿಶ್ವದ ಒಟ್ಟು ತೈಲದ ಶೇ.40ರಷ್ಟನ್ನು ಉತ್ಪಾದಿಸುತ್ತಿವೆ. ಈ ಸಂಘಟನೆಯಲ್ಲಿ ಆಲ್ಜೀರಿಯಾ, ಅಂಗೋಲ, ಈಕ್ವೆಡಾರ್, ಇಂಡೊನೇಷ್ಯಾ, ಇರಾನ್, ಇಕಾಕ್, ಕುವೈತ್, ಲಿಬಿಯ, ನೈಜೀರಿಯ, ಸೌದಿ ಅರೇಬಿಯಾ, ಕತಾರ್, ಸಂಯುಕ್ತ ಅರಬ್ ಎಮಿರೇಟ್ ಮತ್ತು ವೆನೆಜುವಲ ರಾಷ್ಟ್ರಗಳು ಸೇರಿವೆ.
|