ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆಗಸಕ್ಕೇರಿದ ಕಚ್ಚಾ ತೈಲ: ಬ್ಯಾರೆಲ್‌ಗೆ 135 ಡಾ.  Search similar articles
ಜಾಗತಿಕ ಕಚ್ಚಾ ತೈಲ ಬೆಲೆ ಅಭೂತಪೂರ್ವ ಏರಿಕೆ ಕಂಡಿದ್ದು, ಗುರುವಾರ ಬ್ಯಾರೆಲೊಂದಕ್ಕೆ 135ಗಿಂತಲೂ ಹೆಚ್ಚು ಡಾಲರ್‌ಗೆ ತಲುಪಿ ಕಳವಳ ಮೂಡಿಸಿದೆ.

ಡಾಲರ್ ದುರ್ಬಲಗೊಳ್ಳುತ್ತಾ ಹೋಗುತ್ತಿರುವಂತೆಯೇ ಮಾರುಕಟ್ಟೆಗೆ ಭರ್ಜರಿ ನಿಧಿಯ ಒಳಹರಿವು ಹೆಚ್ಚಾಗಿರುವುದರಿಂದ ಪ್ರೇರಿತವಾಗಿ ಅದು ಅಮೆರಿಕದ ಕಚ್ಚಾ ತೈಲದ ಮೇಲೆ ನೇರ ಪರಿಣಾಮ ಬೀರುತ್ತಿದೆ. ಡಾಲರ್ ದುರ್ಬಲವಾಗುತ್ತಿದ್ದಂತೆಲ್ಲಾ ಇತರ ಕರೆನ್ಸಿ ಹೊಂದಿರುವ ಖರೀದಿದಾರರ ಖರೀದಿ ಸಾಮರ್ಥ್ಯ ಹೆಚ್ಚಾಗುತ್ತಾ ಹೋಗುತ್ತದೆ. ಇದು ತೈಲ ಮಾರುಕಟ್ಟೆಯ ಮೇಲೆ ಹೆಚ್ಚು ಪ್ರಭಾವ ಬೀರುತ್ತಿದೆ.

ಮಾರುಕಟ್ಟೆ ಈಗ ಎಷ್ಟರ ಮಟ್ಟಿಗೆ ಏರಿಳಿತ ಕಾಣುತ್ತದೆ ಎಂಬುದನ್ನು ಹೇಳುವಂತಿಲ್ಲ. ಮಾರುಕಟ್ಟೆಯ ಏರಿಕೆ ಪ್ರವೃತ್ತಿ ಮುಂದುವರಿಯಲಿದೆ. ಈಗ ಈ ಪ್ರವೃತ್ತಿಯನ್ನು ಅನುಸರಿಸುತ್ತಾ ಖರೀದಿ ಹೆಚ್ಚಿಸಿಕೊಳ್ಳಬೇಕಷ್ಟೆ ಎಂದು ಟೋಕಿಯೋದ ಕನೆಟ್ಸು ಆಸೆಟ್ ಮ್ಯಾನೇಜ್‌ಮೆಂಟ್ ವಿಶ್ಲೇಷಕ ತಾತ್ಸುವೋ ಕಗೆಯಾಮಾ ಹೇಳಿದ್ದಾರೆ.

ಫೆಡರಲ್ ರಿಸರ್ವ್ ತನ್ನ 2008ರ ಪ್ರಗತಿಯ ಅಂದಾಜನ್ನು ಕಡಿತಗೊಳಿಸಿದ್ದು, ಅತ್ಯಧಿಕ ನಿರುದ್ಯೋಗದ ಬಗ್ಗೆ ಎಚ್ಚರಿಕೆ ನೀಡಿದ ಬಳಿಕ ಬುಧವಾರ ಡಾಲರ್ ಬೆಲೆಯು ಯೂರೋ ಎದುರು ಒಂದು ತಿಂಗಳಷ್ಟು ಕೆಳಗಿನ ಪ್ರಮಾಣಕ್ಕೆ ಕುಸಿಯಿತು. ಇದರೊಂದಿಗೆ ಈ ವರ್ಷಾಂತ್ಯದಲ್ಲಿ ಬಡ್ಡಿದರ ಏರಿಕೆಯ ಸಂಭಾವ್ಯತೆಯೂ ಕಡಿತವಾಯಿತು.
ಮತ್ತಷ್ಟು
ಅಮೆರಿಕದಿಂದ ಒಪೆಕ್ ವಿರೋಧಿ ಮಸೂದೆ
ಟ್ರಾಕ್ಟರ್ ಸಾಲ ಸ್ಥಗಿತದ ಸುತ್ತೋಲೆ ಹಿಂಪಡೆದ ಎಸ್‌ಬಿಐ
ಅಗ್ಗದ ದರದಲ್ಲಿ ರೈಲ್ವೇ ಎಂಜಿನ್ ಪೂರೈಕೆಗೆ ಅಲ್‌ಸ್ಟೋಮ್
ಒರಿಸ್ಸಾಗೆ ವಿಶ್ವಬ್ಯಾಂಕು ನೆರವು ಮುಂದರಿಕೆ
129 ಡಾಲರ್ ಮೀರಿದ ತೈಲ ಬೆಲೆ
2010ರ ವೇಳೆಗೆ ಆಹಾರ ಧಾನ್ಯಗಳ ಬೆಲೆ ಇಳಿಕೆ