ಜಾಗತಿಕ ಕಚ್ಚಾ ತೈಲದ ಬೆಲೆಯಲ್ಲಿ ಗಣನೀಯ ಪ್ರಮಾಣದ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಸರಕಾರಿ ಸ್ವಾಮ್ಯದ ತೈಲ ಮಾರಟ ಕಂಪೆನಿಗಳ ಹಿತಾಸಕ್ತಿಯನ್ನು ಕಾಪಾಡಲು ಸರಕಾರವು ಯೋಜಿಸುತ್ತಿರುವ ಕಾರ್ಯಗಳಲ್ಲಿ ಇಂಧನ ಬೆಲೆಏರಿಕೆಯೂ ಒಂದಾಗಿದೆ. ಕಚ್ಚಾ ತೈಲದ ಬೆಲೆಯು ಬ್ಯಾರಲೊಂದರ 130 ರೂಪಾಯಿಗಳಿಗೇರಿದೆ.
"ಈ ಹಂತದಲ್ಲಿ ಏನನ್ನೂ ತಳ್ಳಿಹಾಕಲಾಗದು ಅಥವಾ ಸ್ವೀಕರಿಸಲಾಗದು" ಎಂದು ಪೆಟ್ರೋಲಿಯಂ ಖಾತೆ ಸಚಿವ ಮುರಳಿ ದಿಯೋರಾ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಏರಿಕೆಯು ಪರಿಹಾರ ಕ್ರಮವೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿತ್ತಾ ಈ ಸುಳಿವು ನೀಡಿದ್ದಾರೆ.
"ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳ ಹಿತವನ್ನು ಕಾಪಾಡಲು ಮತ್ತು ಅವುಗಳಿಗೆ ಸಹಾಯ ಹಸ್ತ ಚಾಚಲು ಸಾಧ್ಯವಿರುವ ಎಲ್ಲಾ ಕ್ರಮಗಳ ಕುರಿತು ಚಿಂತಿಸುತ್ತಿದ್ದೇವೆ. ಕೆಲವು ಕ್ರಮಗಳನ್ನು ತೆಗೆದುಕೊಳ್ಳಲೇ ಬೇಕಾಗಿದೆ. ಆದರೆ ಸಾರ್ವಜನಿಕರು ಈ ಕುರಿತು ಭೀತರಾಗುವ ಅವಶ್ಯಕತೆ ಇಲ್ಲ. ನಾವು ಅವರ ಹಿತವನ್ನೂ ಕಾಪಾಡಲಿದ್ದೇವೆ" ಎಂದು ಹೇಳಿದ್ದಾರೆ.
ಗುರುವಾರದಂದು ಏಷ್ಯಾದ ಮುಂಜಾನೆಯ ವ್ಯವಹಾರದಲ್ಲಿ, ನ್ಯೂಯಾರ್ಕಿನ ಭವಿಷ್ಯದ ಗುತ್ತಿಗೆ ವಹಿವಾಟಿನ ವೇಳೆ ಕಚ್ಚಾ ತೈಲದ ಬೆಲೆಯು ಬ್ಯಾರಲೊಂದರ 135.04ಡಾಲರ್‌ಗೇರಿದ್ದು, ಬಳಿಕ 134.87ರಲ್ಲಿ ಸ್ಥಿರಗೊಂಡಿತು.
ನಾಳೆ ಸಂಪುಟ ಸಭೆ? ಪ್ರಧಾನಿ ಮನಮೋಹನ್ ಸಿಂಗ್ ನೇತೃದಲ್ಲಿ ನಾಳೆ ಸಂಪುಟ ಸಭೆ ನಡೆಯುವ ಸಾಧ್ಯತೆ ಇದ್ದು, ಸಭೆಯಲ್ಲಿ ಬೆಲೆ ಏರಿಕೆ ಕುರಿತು ನಿರ್ಧಾರ ಕೈಗೊಳ್ಳಲಾಗುವುದೆಂದು ಹೇಳಲಾಗಿದೆ.
|