ಕಣ್ಣೂರು: ಕಚ್ಚಾತೈಲದ ಬೆಲೆಯು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದಿನೇದಿನೇ ವೃದ್ಧಿಸುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರದ ತೈಲಕಂಪೆನಿಗಳು ಜೈವಿಕ ಅನಿಲ ಉತ್ಪನ್ನದ ಕುರಿತು ಹೊಸದಾರಿಗಳನ್ನು ಕಂಡು ಹುಡುಕಲು ಯತ್ನಿಸುತ್ತಿವೆ ಎಂದು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಅಧ್ಯಕ್ಷ ಅರುಣ್ ಬಾಲಕೃಷ್ಣನ್ ಹೇಳಿದ್ದಾರೆ.
ಅರುಣ್ ಬಾಲಕೃಷ್ಣನ್ ಅವರು ಇಲ್ಲಿ 11ನೇ ಎ.ಕೆ.ನಾಯರ್ ಮೆಮೋರಿಯಲ್ ಪ್ರಶಸ್ತಿಯನ್ನು ಸ್ವೀಕರಿಸಿ, ಮಾತನಾಡುತ್ತಿದ್ದರು. ಮಹಾರಾಷ್ಟ್ರ, ಆಂಧ್ರ ಪ್ರದೇಶ ಮತ್ತು ಚತ್ತೀಸ್‌ಗಢ ರಾಜ್ಯಗಳಲ್ಲಿ ಜೈವಿಕ ಅನಿಲ ಉತ್ಪಾದನೆಗೆ ಹೆಚ್ಚಿನ ಕ್ರಮವನ್ನು ಕೈಗೊಳ್ಳುತ್ತಿದ್ದು, ಇಲ್ಲಿ ಕಬ್ಬು ಮತ್ತು ಜತ್ರೋಪಾ ಬೀಜವನ್ನು ಈ ಅನಿಲ ಉತ್ಪಾದನೆಗೆ ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಎಚ್‌ಪಿಸಿಎಲ್ ಕಂಪನಿಯು ಗಾಳಿಯಂತ್ರಗಳನ್ನು ಮಹಾರಾಷ್ಟ್ರದ ಧೂಲೆ ಜಿಲ್ಲೆಯಲ್ಲಿ ಸ್ಥಾಪಿಸಲು ಉದ್ದೇಶಸಿದ್ದು, ಇದೇ ರೀತಿಯ ಹಲವಾರು ಯೋಜನೆಗಳು ಕಾರ್ಯಾಚರಣೆಯ ಹಂತದಲ್ಲಿವೆ ಎಂದು ತಿಳಿಸಿದರು.
|