ಉಭಯ ರಾಷ್ಟ್ರಗಳ ನಡುವಿನ ವ್ಯಾಪಾರ ಚಟುವಟಿಕೆಯನ್ನು ವಿಸ್ತರಿಸಲು ಭಾರತ ಮತ್ತು ರಷ್ಯಾಗಳು ಜಂಟಿಯಾಗಿ ಕಾರ್ಯನಿರ್ವಹಿಸುತ್ತಿದ್ದು, 2010ರ ವೇಳೆಗೆ ಈ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ವ್ಯಾಪಾರ 10 ಬಿಲಿಯ ಡಾಲರ್‌ಗೆ ತಲುಪುವ ಅಂದಾಜಿದೆ ಎಂದು ದಕ್ಷಿಣ ಭಾರತದದ ರಷ್ಯಾ ಒಕ್ಕೂಟದ ನಿಯೋಗಿ ಬ್ಲಾಟಿಸ್ಲಾಬ್ ವಿ ಅಂಟೊನ್ಯುಕ್ ಹೇಳಿದ್ದಾರೆ.
ಈಗಾಗಲೇ ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರ ಸುಮಾರು 5 ಬಿಲಿಯ ಡಾಲರ್ ಆಗಿದ್ದು, ಮುಂದಿನ ಕೆಲ ವರ್ಷಗಳಲ್ಲಿ ಇದು ದ್ವಿಗುಣಗೊಳ್ಳಲಿದೆ ಎಂದು ಸಮಾರಂಭವೊಂದರಲ್ಲಿ ಮಾತನಾಡುತ್ತಿದ್ದ ಅವರು ನುಡಿದರು.
ಇಂಧನ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕ್ಷೇತ್ರದಲ್ಲಿ ಹೂಡಿಕೆ ನೆಡಸಲು ರಷ್ಯಾ ಇಚ್ಛಿಸುತ್ತಿದೆ ಎಂದು ಹೇಳಿದ ಅವರು, ತಮಿಳುನಾಡಿನ ಕೂಡಂಗುಲಂನಲ್ಲಿನ ರಷ್ಯಾ ಬೆಂಬಲಿತ ಪರಮಾಣು ವಿದ್ಯುತ್ ಸ್ಥಾವರ 2009ರ ವೇಳೆಗೆ ಚಾಲನೆಯಾಗಲಿದೆ ಎಂದು ತಿಳಿಸಿದರು.
ಬಹು ಉದ್ದೇಶಿತ ಸೇನಾ ಸಾರಿಗೆ ವಿಮಾನ ಮತ್ತು 5ನೇ ತಲೆಮಾರಿನ ಯುದ್ದ ವಿಮಾನಗಳ ಅಭಿವೃದ್ಧಿಗಾಗಿ ಜಂಟಿ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಎರಡೂ ದೇಶಗಳಿಗಾಗಿ ಸಂಚಾರ ಮತ್ತು ಯುದ್ಧ ವಿಮಾನಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಅವರು ವಿವರಿಸಿದರು.
|