ಪೆಟ್ರೋಲ್ ಲೀಟರೊಂದರ 10 ರೂಪಾಯಿ ಮತ್ತು ಡೀಸಿಲ್ ಲೀಟರೊಂದರ ಐದು ರೂಪಾಯಿ ಏರಿಸುವ ಕುರಿತಂತೆ ಪೆಟ್ರೋಲಿಯಂ ಸಚಿವಾಲಯ ಯೋಚಿಸಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಯು ಬ್ಯಾರಲೊಂದರ 135 ಡಾಲರ್ ತಲುಪಿರುವ ಹಿನ್ನೆಲೆಯಲ್ಲಿ ಸೀಮಾಸುಂಕ ಮತ್ತು ಅಬಕಾರಿ ಸುಂಕವನ್ನು ಕಡಿತಗೊಳಿಸುವುದರೊಂದಿಗೆ ಪೆಟ್ರೋಲ್ ಬೆಲೆ ಹೆಚ್ಚಿಸುವ ನಿರ್ಧಾರ ಕೈಗೊಳ್ಳಲಾಗುತ್ತಿದೆ.
"ಪರಿಸ್ಥಿತಿಯು ಎಚ್ಚರಿಕೆ ಗಂಟೆ ಮೊಳಗುತ್ತಿದೆ. ನಾವು ಆರಂಭದಲ್ಲೇ ಇದರ ಬೇರು ಕತ್ತರಿಸಬೇಕಿದೆ" ಎಂದು ಪೆಟ್ರೋಲಿಯಂ ಕಾರ್ಯದರ್ಶಿ ಎಂ.ಎಸ್.ಶ್ರೀನಿವಾಸನ್ ಪಿಎಸ್‌ಯು ಮುಖ್ಯಸ್ಥರೊಂದಿಗೆ ದಾಸ್ತಾನು ಕುರಿತ ಸಭೆಯ ಬಳಿಕ ನುಡಿದರು.
ಅದಾಗ್ಯೂ, ಶುಕ್ರವಾರದ ಸಭೆಯಲ್ಲಿ ಪೆಟ್ರೋಲ್ ಬೆಲೆ ಏರಿಕೆ ಕುರಿತು ನಿರ್ಧಾರ ಕೈಗೊಳ್ಳಲಾಗುವುದಿಲ್ಲ, ಇದಕ್ಕೆ ಇನ್ನಷ್ಟು ತಯಾರಿಗಳು ಬೇಕಿರುವ ಕಾರಣ ಎರಡ್ಮೂರು ದಿನಗಳ ಅವಶ್ಯಕತೆ ಇದೆ ಎಂದು ಅವರು ನುಡಿದರು.
ಈ ಕುರಿತ ನಿರ್ಧಾರವನ್ನು ಮೂರ್ನಾಲ್ಕು ದಿನಗಳಲ್ಲಿ ನಿರೀಕ್ಷಿಸಲಾಗಿದೆ, ಸಚಿವಾಲಯವು ಇಂಧನ ಬೆಲೆ ಏರಿಕೆ ಮತ್ತು ಸುಂಕ ಕಡಿತದ ಸಲಹೆ ನೀಡುತ್ತಿದೆ ಎಂದು ಅವರು ತಿಳಿಸಿದರು.
|