ಜಾಗತಿಕವಾಗಿ ಕಚ್ಛಾ ತೈಲದ ಬೆಲೆಯು ಸಾರ್ವಕಾಲಿಕ ಗರಿಷ್ಠ ಬೆಲೆ ದಾಖಲಿಸಿದ್ದು, ಈ ಹಿನ್ನೆಲೆಯಲ್ಲಿ ಇಂಧನ ಪಡಿತರ ಜಾರಿ ಮಾಡುವುದಿಲ್ಲ ಎಂದು ಹೇಳಿರುವ ಸರಕಾರ, ಇಂಧನದ ನಿರಂತರ ಪೂರೈಕೆಗೆ ಬದ್ಧವಾಗಿರುವುದಾಗಿ ಹೇಳಿದೆ.
ಯಾವುದೇ ಇಂಧನದ ಪೂರೈಕೆಯನ್ನು ಮಿತಗೊಳಿಸುವ ಅಥವಾ ಪಡಿತರಗೊಳಿಸುವ ಇರಾದೆಯನ್ನು ಸರಕಾರ ಹೊಂದಿಲ್ಲ ಎಂದು ಪೆಟ್ರೋಲಿಯಂ ಸಚಿವ ಮುರಳಿ ದೇವೊರಾ ಸ್ಪಷ್ಟಪಡಿಸಿದ್ದಾರೆ. ನಿರ್ದಿಷ್ಟ ರೀತಿಯ ಇಂಧನವನ್ನು ಮಾರಾಟ ಮಾಡಲು ಅಥವಾ ಸರಬರಾಜನ್ನು ನಿಯಂತ್ರಿಸಲು ಯಾವುದೇ ತೈಲ ಮಾರಾಟ ಸಂಸ್ಥೆಗಳಿಗೆ ಸರಕಾರ ಯಾವುದೇ ನಿರ್ದೇಶನವನ್ನು ನೀಡಿಲ್ಲ ಎಂದು ಅವರು ತಿಳಿಸಿದ್ದಾರೆ.
"ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆಯನ್ನು ಮಿತ ಗೊಳಿಸುವ ಅಥವಾ ಪಡಿತರಗೊಳಿಸುವ ಯಾವುದೇ ಯೋಜನೆ ಹೊಂದಿಲ್ಲ. ಕೆಲ ಪಂಪ್‌ಗಳಿಂದ ಸಾಮಾನ್ಯ ವಾಹನ ಇಂಧನವನ್ನೂ ಹಿಂದಕ್ಕೆ ತೆಗೆದುಕೊಳ್ಳಲಾಗಲಿಲ್ಲ" ಎಂದು ಪೆಟ್ರೋಲ್ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಎಸ್ ಸುಂದರೇಶನ್ ತಿಳಿಸಿದ್ದಾರೆ.
ಹೊಸ ಎಲ್‌ಪಿಜಿ ಸಂಪರ್ಕ ನೀಡುವಿಕೆಗೂ ಯಾವುದೇ ನಿರ್ಬಂಧ ಹೇರಲಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
|