ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪೆಟ್ರೋಲ್, ಡೀಸೆಲ್ ಬೆಲೆ 3ರಿಂದ 5 ಪೈಸೆ ಏರಿಕೆ  Search similar articles
ಪೆಟ್ರೋಲಿಯಂ ಇಂಧನ ಮಾರಾಟಕ್ಕಾಗಿ ಡೀಲರ್‌ಗಳಿಗೆ ನೀಡುವ ಕಮಿಷನ್ ಹೆಚ್ಚಿಸಲು ಕೇಂದ್ರ ಸರಕಾರವು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಶುಕ್ರವಾರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಪೆಟ್ರೋಲ್ ಮತ್ತು ಡೀಸಿಲ್ ದರಗಳು ಲೀಟರಿಗೆ 3ರಿಂದ 5 ಪೈಸೆಯಷ್ಟು ಅಲ್ಪಮಟ್ಟಿನ ಏರಿಕೆ ಕಂಡಿದೆ.

ಪ್ರತಿ ಕಿಲೋಲೀಟರ್ ಪೆಟ್ರೋಲಿಗೆ ಡೀಲರ್‌ಗಳ ಕಮಿಷನ್ 28 ರೂ. ಹಾಗೂ ಪ್ರತಿ ಕಿಲೋ ಲೀಟರ್ ಡೀಸೆಲ್‌ಗೆ ಡೀಲರ್ ಕಮಿಷನ್ 31 ರೂ. ಎಂದು ನಿಗದಿಪಡಿಸಲಾಗಿರುವುದಾಗಿ ಇಂಡಿಯನ್ ಆಯಿಲ್ ಕಾರ್ಪೊರೇಶನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಮಿಷನ್ ಏರಿಕೆಯಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲೂ ಅಲ್ಪ ಏರಿಕೆಯು ಶುಕ್ರವಾರ ಮಧ್ಯರಾತ್ರಿಯಿಂದೀಚೆಗೆ ಅನ್ವಯವಾಗುತ್ತಿದೆ.

ಜಾಗತಿಕ ಕಚ್ಚಾ ತೈಲ ಬೆಲೆಯು ಬ್ಯಾರೆಲ್ ಒಂದಕ್ಕೆ 135ಕ್ಕೂ ಹೆಚ್ಚು ಡಾಲರ್‌ಗೆ ಏರಿಕೆ ಕಂಡಿರುವ ಹಿನ್ನೆಲೆಯಲ್ಲಿ, ತೈಲ ಕಂಪನಿಗಳು ನಷ್ಟ ಅನುಭವಿಸುತ್ತಿದ್ದು, ಪೆಟ್ರೋಲ್ ಮತ್ತು ಡೀಸೆಲ್‌ಗೆ 5 ರಿಂದ 10 ರೂ.ಗಳಷ್ಟು ದರ ಏರಿಸಲು ಅವಕಾಶ ಮಾಡಿಕೊಡಬೇಕು ಎಂದು ಪೆಟ್ರೋಲಿಯಂ ಸಚಿವಾಲಯವು ಕೇಂದ್ರಕ್ಕೆ ಶಿಫಾರಸು ಮಾಡಿದೆ.

ಈ ಹಿನ್ನೆಲೆಯಲ್ಲಿ ಇನ್ನೆರಡು ವಾರಗಳಲ್ಲೇ ಪೆಟ್ರೋಲ್, ಡೀಸೆಲ್ ಮತ್ತಿತರ ಪೆಟ್ರೋಲಿಯಂ ಉತ್ಪನ್ನಗಳು ದುಬಾರಿಯಾಗಲಿದೆ.
ಮತ್ತಷ್ಟು
ರೈತರ ಸಾಲಮನ್ನಾ 71,680 ಕೋಟಿಗೇರಿಕೆ
ಇಂಧನ ಪೂರೈಕೆಯಲ್ಲಿ ಧಕ್ಕೆಯಿಲ್ಲ: ದೇವೊರಾ
ವಿದ್ಯಾರ್ಥಿಗಳಿಗೆ ವಿಪ್ರೋದಿಂದ ಕೋಡಿಂಗ್ ಸ್ಪರ್ಧೆ
ಹಣದುಬ್ಬರ ಸ್ಥಗಿತ: ಶೇ0.01ಇಳಿತ
ಪೆಟ್ರೋಲ್ ರೂ.10, ಡಿಸಿಲ್ ರೂ.5 ಏರಿಕೆ?
ಭಾರತ-ರಷ್ಯಾ ವ್ಯಾಪಾರ ದುಪ್ಪಟ್ಟು