ನವದೆಹಲಿ :ರೈಲ್ವೆ ಇಲಾಖೆ ಮೇ 1ರಿಂದ ಮೇ 10ನೇಯ ದಿನಾಂಕದವರೆಗೆ ಒಟ್ಟು ಆದಾಯ 2157.90 ಕೋಟಿ ರೂ.ಗಳಾಗಿದ್ದು ಕಳೆದ ವರ್ಷ 1784.09ಕೋಟಿ ಆದಾಯ ಬಂದಿದ್ದು ಶೇ 20.95 ರಷ್ಟು ಹೆಚ್ಚಳವಾಗಿದೆ ಎಂದು ರೈಲ್ವೆ ಇಲಾಖೆಯ ಮೂಲಗಳು ತಿಳಿಸಿವೆ.
ಸಾಗಾಣಿಕೆ ರೈಲ್ವೆ ಆದಾಯ ಕಳೆದ ವರ್ಷದ ಮೇ 1ರಿಂದ 10 ನೇಯ ದಿನಾಂಕದವರೆಗೆ 1160.92 ಕೋಟಿ ರೂ.ಗಳಾಗಿದ್ದು ಪ್ರಸಕ್ತ ವರ್ಷ 1476.94 ಕೋಟಿ ರೂ.ಗಳಿಗೆ ಏರಿಕೆಯಾಗಿದ್ದುಶೇ 27.22ರಷ್ಟು ಹೆಚ್ಚಳವಾಗಿದೆ ಎಂದು ಪ್ರಕಟಿಸಿದೆ.
ಪ್ರಯಾಣಿಕ ರೈಲ್ವೆ ಆದಾಯ 610.51 ಕೋಟಿ ಗಳಿಗೆ ಏರಿಕೆಯಾಗಿದ್ದು,ಕಳೆದ ವರ್ಷ 559.39 ಕೋಟಿ ರೂ.ಗಳಾಗಿದ್ದು ಶೇ 9.14ರಷ್ಟು ಹೆಚ್ಚಳವಾಗಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.
ಖಾಸಗಿ ಕಂಪೆನಿಗಳಿಗೆ ನೀಡುವ ಕೋಚ್‌ಗಳಿಂದ ಪ್ರಸಕ್ತ ವರ್ಷ 56.86 ಕೋಟಿ ರೂ.ಗಳಾಗಿದ್ದು ಕಳೆದ ವರ್ಷ 50.23ಕೋಟಿ ರೂ.ಗಳಾಗಿದ್ದು ಶೇ 13.20ರಷ್ಟು ಹೆಚ್ಚಳವಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
|