ಮುಂಬೈ :ಪಾಶ್ಚಾತ್ಯ ರಾಷ್ಟ್ರಗಳ ವಹಿವಾಟನ್ನು ಮಾದರಿಯಾಗಿಟ್ಟುಕೊಂಡು ಭಾರತದಲ್ಲಿ ವ್ಯವಹಾರ ಮಾಡುವುದು ಸಾಧ್ಯವಿಲ್ಲ ಎಂದು ಐಸಿಐಸಿಐ ಬ್ಯಾಂಕ್ ಕಾರ್ಯನಿರ್ವಾಹಕ ಅಧಿಕಾರಿ ಕೆ.ವಿ.ಕಾಮತ್ ತಿಳಿಸಿದ್ದಾರೆ.
ಪಾಶ್ಚಾತ್ಯ ರಾಷ್ಟ್ರಗಳ ವಹಿವಾಟನ್ನು ಮಾದರಿಯಾಗಿಟ್ಟುಕೊಂಡು ಭಾರತದಲ್ಲಿ ವ್ಯವಹಾರ ಮಾಡುವುದು ಸಾಧ್ಯವಿಲ್ಲ ಎನ್ನುವುದನ್ನು ಸಮಯ ತೋರಿಸಿಕೊಟ್ಟಿದೆ ಎಂದು ಪುಸ್ತಕಾಲಯವನ್ನು ಉದ್ಘಾಟಿಸಿದ ನಂತರ ಕಾಮತ್ ಮಾತನಾಡಿದರು.
ಭಾರತದ ಟೆಲಿಕಾಂ ಕಂಪೆನಿಗಳನ್ನು ಉದಾಹರಣೆಯಾಗಿ ತೋರಿಸಿದ ಕಾಮತ್ ದೂರವಾಣಿಗೆ ಕಡಿಮೆ ದರದಲ್ಲಿ ಮಾತನಾಡುವ ಅವಕಾಶ ಕಲ್ಪಿಸಿದ ದೇಶಗಳಲ್ಲಿ ಭಾರತ ಮೊದಲನೆಯದಾಗಿದೆ ಎಂದು ಹೇಳಿದ್ದಾರೆ.
ಭಾರತ ಪಾಶ್ಚಾತ್ಯ ರಾಷ್ಟ್ರಗಳ ಟೆಲಿಕಾಂ ವಹಿವಾಟನ್ನು ಅನುಕರಿಸಿದಲ್ಲಿ ಯಶಸ್ವಿಯಾಗಲಾರದು.ವಿದೇಶಿ ಟೆಲಿಕಾಂ ಸಂಸ್ಥೆಗಳು ನಿಗದಿಪಡಿಸುವ ದರವನ್ನು ಭಾರತೀಯರು ಭರಿಸಲಾರರು ಎಂದು ಹೇಳಿದ್ದಾರೆ.
ಭಾರತ ಸಂಶೋಧನೆಯಲ್ಲಿ ಜಗತ್ತಿನ ರಾಜಧಾನಿಯಾಗಿದೆ.ಈಗ ನಾವು ಅದನ್ನು ಸಾಬೀತುಪಡಿಸಬೇಕಾಗಿದೆ.ಟಾಟಾ ಅವರ 1ಲಕ್ಷ ರೂ. ನ್ಯಾನೊ ಕಾರು ಜಗತ್ತಿನ ಎಲ್ಲ ದೇಶಗಳ ಮನವನ್ನು ಸೂರೆಗೊಂಡಿದ್ದು ಕಾತುರದಿಂದ ನಿರೀಕ್ಷಿಸುತ್ತಿದ್ದಾರೆ ಎಂದು ಕಾಮತ್ ಹೇಳಿದ್ದಾರೆ.
|