ನವದೆಹಲಿ :ಜಾಗತಿಕವಾಗಿ ಅಹಾರ ಧಾನ್ಯಗಳ ಕೊರತೆ ಹಾಗೂ ದರ ಹೆಚ್ಚಳ ಕುರಿತಂತೆ ಆತಂಕ ಬೇಡ. ದೇಶದಲ್ಲಿ ಅಹಾರ ಧಾನ್ಯಗಳ ಸಂಗ್ರಹ ಸಾಕಷ್ಟಿದೆ ಎಂದು ಕೇಂದ್ರ ಹಣಕಾಸು ಖಾತೆ ಸಚಿವ ಪಿ.ಚಿದಂಬಂರಂ ಹೇಳಿದ್ದಾರೆ.
ಪ್ರಸಕ್ತ ವರ್ಷದಲ್ಲಿ ಸ್ವಾತಂತ್ರಾನಂತರದಲ್ಲಿ ಎಂದೂ ಬೆಳೆದಿರದಂತಹ ಗೋಧಿ ಬೆಳೆಯನ್ನು ಬೆಳೆಯಲಾಗಿದ್ದು ಅಹಾರ ಸಂಗ್ರಹದಲ್ಲಿ ಕೊರತೆಯಿಲ್ಲ ಎಂದು ಸಚಿವ ಚಿದಂಬರಂ ಹೇಳಿದ್ದಾರೆ.
ಸರಕಾರಕ್ಕೆ ವಾರ್ಷಿಕವಾಗಿ 150ಲಕ್ಷ ಟನ್ ಗೋಧಿಯ ಅಗತ್ಯತೆ ಇದ್ದು, ಸರಕಾರಿ ಸಂಗ್ರಹದಲ್ಲಿ 207 ಲಕ್ಷ ಟನ್ ಗೋಧಿ ಬೆಲೆಯ ಸಂಗ್ರಹವಿದೆ. ಪಂಜಾಬ್ ರಾಜ್ಯದಿಂದ ಶೇ 98.4ರಷ್ಟು ಹಾಗೂ ಹರಿಯಾಣಾ ರಾಜ್ಯದಿಂದ ಶೇ 99ರಷ್ಟು ಗೋಧಿ ಸಂಗ್ರಹ ಮಾಡಲಾಗಿದೆ ಎಂದು ಹೇಳಿದ್ದಾರೆ. ದೇಶದ ಅನೇಕ ರಾಜ್ಯಗಳು ಕೇಂದ್ರ ಸರಕಾರದೊಂದಿಗೆ ಸಹಯೋಗದಲ್ಲಿದ್ದು,ಕಳೆದ ವರ್ಷಗಿಂತ ಹೆಚ್ಚಿನ ಬೆಳೆಯನ್ನು ಬೆಳೆಯುವಲ್ಲಿ ಯಶಸ್ವಿಯಾಗಿವೆ. ಭತ್ತದ ಬೆಳೆ ಕೂಡಾ ಉತ್ತಮವಾಗಿ ಬಂದಿದೆ. ಇಲ್ಲಿಯವರೆಗೆ 245ಲಕ್ಷ ಟನ್ ಭತ್ತದ ಸಂಗ್ರಹ ಮಾಡಲಾಗಿದ್ದು ಸೆಪ್ಟೆಂಬರ್ ಅಂತ್ಯದವರೆಗೆ ಇನ್ನು ಹೆಚ್ಚಿನ ಗುರಿಯನ್ನು ತಲುಪುವ ನಿರೀಕ್ಷೆಯಿದೆ ಎಂದು ಸಚಿವ ಚಿದಂಬರಂ ಹೇಳಿದ್ದಾರೆ.
|