ಜಾಗತಿಕ ಮಾರುಕಟ್ಟೆಯಲ್ಲಿ ಅನಿಲ ಮತ್ತು ಕಚ್ಚಾ ತೈಲದ ದರಗಳ ಏರಿಕೆಯ ಹಿನ್ನೆಲೆಯಲ್ಲಿ ಇಂಡೋನೇಷಿಯಾ ಕೂಡಾ ಪೆಟ್ರೋಲ್ ಹಾಗೂ ಡಿಸೈಲ್ ದರಗಳ ಮೇಲೆ ಶೇ 30ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.
ದೇಶದ ಅನೇಕ ನಗರಗಳಲ್ಲಿ ದರ ಹೆಚ್ಚಳವನ್ನು ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ನಡೆಸಿದ್ದು ಬಡವರಿಗೆ ದರ ಹೆಚ್ಚಳದಿಂದ ತೊಂದರೆ ಎದುರಾಗುತ್ತದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆಗಳಲ್ಲಿ ಏರಿಕೆಯಾದ ಹಿನ್ನಲೆಯಲ್ಲಿ ದರ ಏರಿಕೆ ಅನಿವಾರ್ಯವಾಗಿದ್ದು ದೇಶದ ಬಜೆಟ್‌ಗೆ ಮಾರಕವಾಗಿದೆ ಎಂದು ಇಂಧನ ಖಾತೆ ಸಚಿವ ಯುಜಿಯಂಟ್ರೊ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇಂಡೋನೇಷಿಯಾದ 2008ರ ವಾರ್ಷಿಕ ಬಜೆಟ್ ಮಂಡನೆಯ ಸಂದರ್ಭದಲ್ಲಿ ಪ್ರತಿ ಬ್ಯಾರೆಲ್‌ಗೆ 85 ಡಾಲರ್ ನಿಗದಿಪಡಿಸಲಾಗಿತ್ತು.ನಂತರ 100ಡಾಲರ್‌ಗೆ ಏರಿಕೆ ಮಾಡಲಾಯಿತು. ಇದರಿಂದಾಗಿ ದೇಶದ ಬಜೆಟ್‌ಗೆ ಕೊರತೆ ಎದುರಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
|