ನವದೆಹಲಿ: ಹೂಡಿಕೆ ಮತ್ತು ವಿಮಾ ಸೌಲಭ್ಯಗಳಿರುವ ಯೂನಿಟ್ ಸಂಪರ್ಕಿತ ಎಂಡೋಮೆಂಟ್ ಯೋಜನೆಯಾಗಿರವ ಮನಿಪ್ಲಸ್ 1 ಅನ್ನು ಜೀವವಿಮಾ ನಿಗಮ ಅನಾವರಣಗೊಳಿಸಿದೆ.
ಈ ಪಾಲಿಸಿಯ ವಿಮಾಮೊತ್ತವು ವಾರ್ಷಿಕ ಪ್ರೀಮಿಯಂಗಿಂತ ಐದು ಪಟ್ಟು ಹೆಚ್ಚಾಗಿದೆ. ಮತ್ತು ಗರಿಷ್ಠ ವಿಮಾ ಮೊತ್ತವು ಪ್ರೀಮಿಯಂಗಿಂತ 30 ಪಟ್ಟು ಹೆಚ್ಚಾಗುವ ಸಾಧ್ಯತೆ ಇದ್ದು, ಇದು ಪ್ರವೇಶಮಟ್ಟದ ವಯಸ್ಸನ್ನಾಧರಿಸಿದೆ. ಪ್ರದೇಶ ಮಟ್ಟದ ವಯಸ್ಸು 0-65 ವರ್ಷಗಳಾಗಿದ್ದು, ಪಾಲಿಸಿ ಅವಧಿಯು ಐದರಿಂದ 30 ವರ್ಷವಾಗಿದೆ.
ಈ ಆರ್ಥಿಕ ವರ್ಷದಲ್ಲಿ ಈ ಪಾಲಿಸಿಯಿಂದ 18 ಶತಕೋಟಿ ಮೊತ್ತ ಸಂಗ್ರಹಿಸುವ ಗುರಿ ಹೊಂದಿರುವುದಾಗಿ ಜೀವವಿಮಾ ನಿಗಮದ ಪ್ರಾಂತೀಯ ಪ್ರಬಂಧಕ ಆರ್.ಆರ್.ಡೇಶ್ ಹೇಳಿದ್ದಾರೆ.
|