ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೊಸ ತಂತ್ರ ಅಳವಡಿಸಲು ಖಾದಿ ಉದ್ಯಮಕ್ಕೆ ಕರೆ  Search similar articles
ಖಾದಿ ಉತ್ಪನ್ನಗಳನ್ನು ಜನಪ್ರಿಯಗೊಳಿಸಲು, ದೊಡ್ಡ ಜವಳಿ ಕಂಪೆನಿಗಳ ಅವಶ್ಯಕತೆಗಳಿಗೆ ತಕ್ಕಂತೆ ಫ್ಯಾಶನ್‌‌ಗಳನ್ನು ಬದಲಿಸಿ, ಮಾಧ್ಯಮಗಳ ಪ್ರಚಾರದ ಮೂಲಕ ಮಾರುಕಟ್ಟೆ ಪಡೆಯುವ ತಂತ್ರವನ್ನು ಉದ್ಯಮವು ಅಳವಡಿಸಿಕೊಳ್ಳಬೇಕು ಎಂದು ಕೇರಳ ರಾಜ್ಯಪಾಲ ಆರ್.ಎಲ್.ಭಾಟಿಯಾ ಹೇಳಿದ್ದಾರೆ.

ಕಣ್ಣೂರು ಜಿಲ್ಲೆಯಲ್ಲಿ ಪಯ್ಯನೂರು ಖಾದಿ ಕೇಂದ್ರದ ಸುವರ್ಣಮಹೋತ್ಸವ ಭವನಕ್ಕೆ ಶಿಲನ್ಯಾಸ ಮಾಡಿದ ಬಳಿಕ ಮಾತನಾಡುತ್ತಿದ್ದ ಅವರು, ಖಾದಿ ಉದ್ಯಮನ್ನು ವ್ಯೂಹಾತ್ಮಕವಾಗಿ ದೂರದೃಷ್ಟಿಕೋನದ ಮೂಲಕ ಚುರುಕುಗೊಳಿಸಬೇಕು ಎಂದು ನುಡಿದರು.

ಖಾದಿಯು ಸ್ವಾವಲಂಭನೆಯ ಸಂಕೇತ ಮತ್ತು ಇದನ್ನು ಗಾಂಧೀಜಿ ಅವರು ಸ್ವಾತಂತ್ರ್ಯ ಸಂಗ್ರಾಮದ ವೇಳೆ ಉತ್ತೇಜಿಸಿ ಪ್ರಚುರಪಡಿಸಿದ್ದರು ಎಂಬುದನ್ನು ನೆನಪಿಸಿಕೊಂಡ ಅವರು ಕೇರಳ ಖಾದಿ ಮಂಡಳಿಯು ಗ್ರಾಮೀಣ ಪ್ರದೇಶಗಳಲ್ಲಿ ಖಾದಿ ಉದ್ಯಮಗಳನ್ನು ಉತ್ತೇಜಿಸುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಕೇರಳ ಉದ್ಯಮ ಸಚಿವ ಎಲಮಾರನ್ ಕರೀಂ ಅವರು ರಾಜ್ಯಸರಕಾರವು ಶಾಲಾಮಕ್ಕಳ ಖಾದಿ ಸಮವಸ್ತ್ರಗಳಿಗೆ ಹೊಸ ಶೈಕ್ಷಣಿಕ ವರ್ಷದಲ್ಲಿ 15 ದಿನಗಳ ಸಹಾಯಧನ ನೀಡಲಿದೆ ಎಂದು ನುಡಿದರು.
ಮತ್ತಷ್ಟು
ಎಲ್ಐಸಿ‌ಯಿಂದ ಮನಿಪ್ಲಸ್ 1 ಆರಂಭ
ತೈಲದ ಬೆಲೆಯಲ್ಲಿ ಶೇ30ರಷ್ಟು ಹೆಚ್ಚಳ
ನ್ಯಾನೊ ಕಾರು ನಿರೀಕ್ಷಿಸುತ್ತಿರುವ ಕ್ಯೂಬಾ
ಅಹಾರ ಧಾನ್ಯಗಳ ಸಾಕಷ್ಟು ಸಂಗ್ರಹವಿದೆ-ಚಿದಂಬರಂ
ಪಾಶ್ಚಾತ್ಯ ರಾಷ್ಟ್ರಗಳ ವಹಿವಾಟಿನ ಮಾದರಿ ಅಗತ್ಯವಿಲ್ಲ -ಕಾಮತ್
ರೈಲ್ವೆ ಆದಾಯದಲ್ಲಿ ಶೇ 20.96 ರಷ್ಟು ಹೆಚ್ಚಳ