ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೈಗಾರಿಕೆ ಕುಂಠಿತಕ್ಕೆ ಆರ್‌ಬಿಐ ನೀತಿಗಳು ಕಾರಣ  Search similar articles
ನವದೆಹಲಿ :ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಕಠಿಣ ಆರ್ಥಿಕ ನೀತಿಗಳಿಂದಾಗಿ ಕೈಗಾರಿಕೆ ಅಭಿವೃದ್ಧಿ ಕುಂಠಿತವಾಗಿದೆ ಎಂದು ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಪ್ ಕಾಮರ್ಸ್ ಆಂಡ ಇಂಡಸ್ಟ್ರೀ ಅಧ್ಯಯನದ ಮೂಲಗಳು ತಿಳಿಸಿವೆ.

ಕೈಗಾರಿಕಾ ಅಭಿವೃದ್ಧಿ ನಿಧಾನಗತಿಯಲ್ಲಿ ಸಾಗಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಕಠಿಣ ಆರ್ಥಿಕ ನೀತಿಗಳು ಕಾರಣವಾಗಿದ್ದು, ಮಾರ್ಚ್ 2007ರಲ್ಲಿ ಶೇ 14.8 ರಷ್ಟು ಇಳಿಮುಖವಾಗಿ ಮಾರ್ಚ್ 8 ರ ವೇಳೆಗೆ ಶೇ 3ರಷ್ಟು ಇಳಿಕೆಯಾಗಿದೆ ಎಂದು ನಿಧಾನಗತಿಯಲ್ಲಿ ಕೈಗಾರಿಕಾ ಅಭಿವೃದ್ಧಿ ಮತ್ತು ಆರ್‌ಬಿಐ ನಿಯಮಗಳು ಕುರಿತಂತೆ ನಡೆದ ಅಧ್ಯಯನದಲ್ಲಿ ತಿಳಿಸಿದೆ.

ರೂಪಾಯಿ ಮೌಲ್ಯದ ದರಗಳಲ್ಲಿ ವೃದ್ಧಿ ಹಾಗೂ ಹೆಚ್ಚುತ್ತಿರುವ ಬಡ್ಡಿ ದರಗಳಿಂದಾಗಿ 2007-08ರಲ್ಲಿ 5 ಬಿಲಿಯನ್ ಡಾಲರ್‌ ವಾರ್ಷಿಕ ರಫ್ತನ್ನು ಭಾರತ ಕಳೆದುಕೊಂಡಿದೆ ಎಂದು ಹೇಳಿದೆ.

ಹಣದುಬ್ಬರದ ಒತ್ತಡದಿಂದಾಗಿ ಉತ್ಪಾದಕ ವಸ್ತುಗಳನ್ನು ಸರಬರಾಜು ಮಾಡುವ ಕೊರತೆ ಎದುರಾಗುತ್ತಿದ್ದು, ಸತತ ದರಗಳ ನಿಯಂತ್ರಣ ಅಗತ್ಯವಿದೆ ಎಂದು ಅಧ್ಯಯನದಲ್ಲಿ ತಿಳಿಸಿದೆ.
ಮತ್ತಷ್ಟು
ಹಣದುಬ್ಬರದಿಂದ ಯುಪಿಎಗೆ ಪರಿಣಾಮವಿಲ್ಲ-ಚಿದಂಬರಂ
ಹೊಸ ತಂತ್ರ ಅಳವಡಿಸಲು ಖಾದಿ ಉದ್ಯಮಕ್ಕೆ ಕರೆ
ಎಲ್ಐಸಿ‌ಯಿಂದ ಮನಿಪ್ಲಸ್ 1 ಆರಂಭ
ತೈಲದ ಬೆಲೆಯಲ್ಲಿ ಶೇ30ರಷ್ಟು ಹೆಚ್ಚಳ
ನ್ಯಾನೊ ಕಾರು ನಿರೀಕ್ಷಿಸುತ್ತಿರುವ ಕ್ಯೂಬಾ
ಅಹಾರ ಧಾನ್ಯಗಳ ಸಾಕಷ್ಟು ಸಂಗ್ರಹವಿದೆ-ಚಿದಂಬರಂ