ಅಂತರಾಷ್ಟ್ರೀಯ ಉತ್ಪಾದಕರು ಹಾಗೂ ಖಾಸಗಿ ಶೇರು ಬಂಡವಾಳ ಹೂಡಿಕೆದಾರರಿಗೆ ಜವಳಿ ಕ್ಷೇತ್ರದ ಸಣ್ಣ ಕೈಗಾರಿಕೆ ಘಟಕಗಳಿಗೆ ಪಾಲುದಾರಿಕೆಯಲ್ಲಿ ಹೂಡಿಕೆ ಮಾಡುವಂತೆ ಉತ್ತೇಜನ ನೀಡಬೇಕು ಎಂದು ಕೈಗಾರಿಕ ಸಂಘ ಅಸೋಚಾಮ್ ಸರಕಾರಕ್ಕೆ ಸಲಹೆ ನೀಡಿದೆ.
ಶೇ100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅನುಮತಿ ಇದ್ದರೂ ಕೂಡಾ ಜವಳಿ ಕ್ಷೇತ್ರ ವಿದೇಶಿ ನೇರ ಬಂಡವಾಳ ಹೂಡಿಕೆಯ ಕೊರತೆಯನ್ನು ಎದುರಿಸುತ್ತಿದೆ ಎಂದು ಭಾರತದ ಜವಳಿ ಕ್ಷೇತ್ರ ಕುರಿತು ಅಧ್ಯಯನ ನಡೆಸಿದ ಅಸೋಚಾಮ್ ತನ್ನ ವರದಿಯಲ್ಲಿ ತಿಳಿಸಿದೆ.
ಜವಳಿ ಕ್ಷೇತ್ರ ಪ್ರಸ್ತುತ ಕೆಲ ಅಡತಡೆಗಳನ್ನು ಎದುರಿಸುತ್ತಿದ್ದು, 55 ಬಿಲಿಯನ್ ಡಾಲರ್ ಹೂಡಿಕೆಯಾದಲ್ಲಿ, 65.4 ಮಿಲಿಯನ್ ಉದ್ಯೋಗವಕಾಶಗಳು ಸೃಷ್ಟಿಯಾಗಿ ಮುಂಬರುವ 2010ರ ವೇಳೆಗೆ ಕಾರ್ಮಿಕ ಶಕ್ತಿ ಶೇ 22ರಷ್ಟು ಹೆಚ್ಚಾಗಲಿದೆ ಎಂದು ಅಸೋಚಾಮ್ ಸಂಘದ ಅಧ್ಯಕ್ಷ ವೇಣುಗೋಪಾಲ್ ದೂತ್ ಹೇಳಿದ್ದಾರೆ.
|