ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗೋಧಿ, ಭತ್ತದ ಸಂಗ್ರಹಣೆಯಲ್ಲಿ ಹೆಚ್ಚಳವಾಗಲಿದೆ.  Search similar articles
ನವದೆಹಲಿ: ಪ್ರಸ್ತುತ ಭಾರತದಲ್ಲಿ ಗೋಧಿ ಮತ್ತು ಭತ್ತದ ಸಂಗ್ರಹಣೆ ಉತ್ತಮ ಸ್ಥಿತಿಯಲ್ಲಿದ್ದು,ಮುಂಬರುವ ಎರಡು ವರ್ಷಗಳಲ್ಲಿ ಹೆಚ್ಚಿನ ಸಂಗ್ರಹದ ಸಮಸ್ಯೆ ಎದುರಾಗಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಗೋಧಿ ಮತ್ತು ಭತ್ತದ ದರಗಳಲ್ಲಿ ನಿರಂತರ ಹೆಚ್ಚಳವಾಗುತ್ತಿರುವುದರಿಂದ ಗೋಧಿ ಮತ್ತು ಭತ್ತದ ಸಂಗ್ರಹಣೆಯಲ್ಲಿ ಹೆಚ್ಚಳವಾಗಲಿದೆ ಎಂದು ಅಮೆರಿಕ ಮೂಲದ ಅಂತಾರಾಷ್ಟ್ರೀಯ ಅಹಾರ ನೀತಿ ಸಂಶೋಧನಾ ವಿಭಾಗದ ಭಾರತದ ಅಧ್ಯಕ್ಷ ಅಶೋಕ್ ಗುಲಾಟಿ ತಿಳಿಸಿದ್ದಾರೆ.

ಅಹಾರ ಧಾನ್ಯಗಳ ಬೆಲೆಗಳಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಕ್ಕರೆ ಮಾರುಕಟ್ಟೆಯಲ್ಲಿ ದರದ ಕೊರತೆ ಎದುರಿಸುತ್ತಿರುವ ಕಬ್ಬು ಉತ್ಪಾದಕರನ್ನು ಅಹಾರ ಧಾನ್ಯ ಬೆಳೆಯುವಲ್ಲಿ ಆಕರ್ಷಿಸುತ್ತಿದೆ ಎಂದು ಗುಲಾಟಿ ಅಭಿಪ್ರಾಯಪಟ್ಟಿದ್ದಾರೆ.

2007-08ರಲ್ಲಿ ಭಾರತ ದಾಖಲೆಯ 76.78 ಮಿಲಿಯನ್ ಟನ್ ಗೋಧಿ ಮತ್ತು 95.68 ಮಿಲಿಯನ್ ಟನ್ ರೈಸ್ ಉತ್ಪಾದಿಸಿದ್ದು, 27 ಮಿಲಿಯನ್ ಟನ್ ಸಕ್ಕರೆಯನ್ನು ಉತ್ಪಾದಿಸಿದೆ ಎಂದು ಹೇಳಿದ್ದಾರೆ.
ಮತ್ತಷ್ಟು
ಜವಳಿ ಕ್ಷೇತದಲ್ಲಿ ಸಾಗರೋತ್ತರ ಹೂಡಿಕೆ ಉತ್ತೇಜನ ಅಗತ್ಯ
ಕೈಗಾರಿಕೆ ಕುಂಠಿತಕ್ಕೆ ಆರ್‌ಬಿಐ ನೀತಿಗಳು ಕಾರಣ
ಹಣದುಬ್ಬರದಿಂದ ಯುಪಿಎಗೆ ಪರಿಣಾಮವಿಲ್ಲ-ಚಿದಂಬರಂ
ಹೊಸ ತಂತ್ರ ಅಳವಡಿಸಲು ಖಾದಿ ಉದ್ಯಮಕ್ಕೆ ಕರೆ
ಎಲ್ಐಸಿ‌ಯಿಂದ ಮನಿಪ್ಲಸ್ 1 ಆರಂಭ
ತೈಲದ ಬೆಲೆಯಲ್ಲಿ ಶೇ30ರಷ್ಟು ಹೆಚ್ಚಳ