ಅಪೋಲೊ ಟೈಯರ್ಸ್ ಮುಂಬರುವ ಮೂರು ವರ್ಷಗಳಲ್ಲಿ ದೇಶ ವಿದೇಶಗಳಲ್ಲಿ ಉತ್ಪಾದನೆಯನ್ನು ಹೆಚ್ಚಿಸಲು 2ಸಾವಿರ ಕೋಟಿ ರೂ.ಗಳ ಹೂಡಿಕೆ ಮಾಡಲಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಅಪೋಲೊ ಕಂಪೆನಿ ಹಂಗೇರಿಯಲ್ಲಿ ಘಟಕ ಸ್ಥಾಪನೆ ಮಾಡಲು ಉದ್ದೇಶಿಸಿದ್ದು, ಗುಜರಾತ್‌ನ ವಡೋದರಾದಲ್ಲಿರುವ ಘಟಕವನ್ನು ವಿಸ್ತರಿಸುವುದಲ್ಲದೇ ಚೆನ್ನೈನಲ್ಲಿ ಕೂಡಾ ಘಟಕವನ್ನು ಸ್ಥಾಪಿಸಲು ನಿರ್ಧರಿಸಿದೆ.
ಹಂಗೇರಿಯಲ್ಲಿ 200ಮಿಲಿಯನ್ ಯುರೋ ವೆಚ್ಚದಲ್ಲಿ ಘಟಕವನ್ನು ಸ್ಥಾಪಿಸುವುದು ಸೇರಿದಂತೆ ಮುಂಬರುವ ಮೂರು ವರ್ಷದಲ್ಲಿ 2ಸಾವಿರ ಕೋಟಿ .ರೂಗಳನ್ನು ಹೂಡಿಕೆ ಮಾಡಲು ಯೋಜನೆಯನ್ನು ರೂಪಿಸಲಾಗಿದೆ ಎಂದು ಅಪೋಲೊ ಟೈರ್ಸ್ ಭಾರತದ ಮುಖ್ಯಸ್ಥ ಸತೀಶ್ ಶರ್ಮಾ ತಿಳಿಸಿದ್ದಾರೆ.
ಹಂಗೇರಿಯಲ್ಲಿ ಘಟಕವನ್ನು ಸ್ಥಾಪಿಸಲು ಈಗಾಗಲೇ 45 ಹೆಕ್ಟೇರ್ ಭೂಮಿಯನ್ನು ಖರೀದಿಸಲಾಗಿದ್ದು 1350 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ಹೇಳಿದ್ದಾರೆ.
ಹಂಗೇರಿ ಘಟಕದಿಂದ ಪ್ರಯಾಣಿಕ ರೇಡಿಯಲ್ ಟೈರ್‌ಗಳನ್ನು ಯುರೋಪ್ , ಉತ್ತರ ಅಮೆರಿಕ ಸೇರಿದಂತೆ ಇನ್ನಿತರ ವಿದೇಶಗಳಿಗೆ ಸರಬರಾಜು ಮಾಡುವ ಕೇಂದ್ರ ಸ್ಥಾನವಾಗಿರುತ್ತದೆ ಎಂದು ಹೇಳಿದ್ದಾರೆ.
ಗುಜರಾತ್‌ನ ವಡೋದರಾದಲ್ಲಿರುವ ಘಟಕದಲ್ಲಿ ಪ್ರತಿನಿತ್ಯ 10 ಸಾವಿರ ಟೈರ್‌ಗಳನ್ನು ಉತ್ಪಾದಿಸಲಾಗುತ್ತಿದ್ದು,2009ರ ಮಧ್ಯದ ವೇಳೆಗೆ 15 ಸಾವಿರಕ್ಕೆ ಉತ್ಪಾದನೆಯನ್ನು ಹೆಚ್ಚಿಸಲಾಗುವುದು ಹೇಳಿದ್ದಾರೆ.
|