ನವದೆಹಲಿ : ದೇಶದ ಮೆಟ್ರೋನಗರಗಳು ಹಾಗೂ ಪಟ್ಟಣಗಳಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುವ ಸಾಗರೋತ್ತರ ರೋಗಿಗಳಿಗೆ ಸುಲಭ ವೀಸಾ ಸೌಲಭ್ಯಕ್ಕೆ ಸರಕಾರ ಅನುಮತಿ ನೀಡಲಾಗಿದ್ದು ಇದರಿಂದ ಮುಂಬರುವ 2012ರ ವೇಳೆಗೆ 8ಸಾವಿರ ಕೋಟಿ ರೂ ವಿದೇಶಿ ವಿನಿಮಯ ಹೆಚ್ಚಾಗಲಿದೆ ಎಂದು ಅಧ್ಯಯನದ ವರದಿಯೊಂದು ತಿಳಿಸಿದೆ.
ಪ್ರಸ್ತುತ ವೈದ್ಯಕೀಯ ಪ್ರವಾಸದಿಂದಾಗಿ ವಾರ್ಷಿಕವಾಗಿ 3500 ಕೋಟಿ ರೂ. ಆದಾಯವಾಗುತ್ತಿದ್ದು ಮುಂಬರುವ ದಿನಗಳಲ್ಲಿ ಹೆಚ್ಚಾಗಲಿದೆ ಎಂದು ಅಧ್ಯಯನದ ವರದಿಯಲ್ಲಿ ಪ್ರಕಟಿಸಲಾಗಿದೆ.
ವೈದ್ಯಕೀಯ ಚಿಕಿತ್ಸೆಗಾಗಿ ವಿದೇಶಗಳಲ್ಲಿ, ಬೆನ್ನುಮೂಳೆಯಲ್ಲಿರುವ ಕೊಬ್ಬು ಬದಲಾವಣೆಗೆ ಅಮೆರಿಕದಲ್ಲಿ 2ಲಕ್ಷ ಡಾಲರ್ ವೆಚ್ಚವಾಗುತ್ತಿದ್ದು, ಇಂಗ್ಲೆಂಡ್‌ನಲ್ಲಿ 2ಲಕ್ಷ ಡಾಲರ್, ಥೈಲ್ಯಾಂಡ್‌ನಲ್ಲಿ 62,500 ಡಾಲರ್ ವೆಚ್ಚವಾಗುತ್ತಿದ್ದು , ಭಾರತದಲ್ಲಿ ಕೇವಲ 20ಸಾವಿರ ಡಾಲರ್ ವೆಚ್ಚವಾಗುತ್ತದೆ
ಅದರಂತೆ ಬೈ ಪಾಸ್ ಸರ್ಜರಿ ಅಮೆರಿಕದಲ್ಲಿ 15ರಿಂದ 20 ಸಾವಿರ ಡಾಲರ್ ವೆಚ್ಚವಾಗುತ್ತಿದ್ದು, ಇಂಗ್ಲೆಂಡ್‌ನಲ್ಲಿ 20 ಸಾವಿರ ಡಾಲರ್ ,ಥೈಲ್ಯಾಂಡ್‌ನಲ್ಲಿ 14,250 ಡಾಲರ್ ಭಾರತದಲ್ಲಿ ಕೇವಲ 4ರಿಂದ 6ಸಾವಿರ ಡಾಲರ್ ವೆಚ್ಚವಾಗುತ್ತದೆ. ಮಂಡಿ ಶಸ್ತ್ರಚಿಕಿತ್ಸೆಗೆ ಅಮೆರಿಕದಲ್ಲಿ 16ರಿಂದ 17 ಸಾವಿರ ಡಾಲರ್,ಇಂಗ್ಲೆಂಡ್‌ನಲ್ಲಿ 15ಸಾವಿರ ಡಾಲರ್ ಥೈಲ್ಯಾಂಡ್‌ನಲ್ಲಿ 7 ಸಾವಿರ ಡಾಲರ್, ಭಾರದತಲ್ಲಿ ಕೇವಲ 1 ಸಾವಿರ್ ಡಾಲರ್ ವೆಚ್ಚವಾಗುತ್ತದೆ.
ವೈದ್ಯಕೀಯ ಪ್ರವಾಸ ಕುರಿತಂತೆ ದೇಶದ ಕೈಗಾರಿಕೊದ್ಯಮ ಸಂಸ್ಥೆ ಅಧ್ಯಯನ ನಡೆಸಿ ವರದಿಯೊಂದನ್ನು ಸಲ್ಲಿಸಿದ್ದು.ವೈದ್ಯಕೀಯ ಪ್ರವಾಸದಿಂದಾಗಿ ಹೆಚ್ಚಿನ ವಿದೇಶಿ ವಿನಿಮಯ ಗಳಿಸಬಹುದಾಗಿದೆ ಎಂದು ವರದಿಯಲ್ಲಿ ಪ್ರಕಟಿಸಿದೆ.
|