ಸಣ್ಣ ಕಾರುಗಳ ಉತ್ಪಾದನೆಗೆ ಸಿದ್ದವಾಗುತ್ತಿರುವ ಕೋರಿಯಾ ಮೂಲದ ಹುಂಡೈ ಕಂಪನಿಯು ಸಣ್ಣ ಕಾರುಗಳನ್ನು ಅಮೆರಿಕದಲ್ಲಿರುವ ಕಾರು ತಯಾರಿಕಾ ಘಟಕದಲ್ಲಿ ಪ್ರಾರಂಭಿಸಲಾಗುವುದು ಎಂದು ಹೇಳಿದೆ.
ಅಮೆರಿಕದಲ್ಲಿ ಇರುವ ಹುಂಡೈ ಕಂಪನಿಯ ಸಹ ಸಂಸ್ಥೆ ಕಿಯಾ ಮೋಟರ್ಸ್ನ ಅಲಾಬಾಮಾದಲ್ಲಿರುವ ವಾಹನ ತಯಾರಿಕಾ ಘಟಕದಲ್ಲಿ ಪ್ರಾರಂಭಿಸಲಾಗುವುದು ಎಂದು ಕಂಪನಿಯು ಹೇಳಿದೆ. ಹುಂಡೈ ಸೊನಾಟಾವನ್ನು ಹೋಲುವ ಸೆಡನ್ ಎಸ್ಯುವಿ ಕಾರನ್ನು ಕಂಪನಿ ತಯಾರಿಸಲಿದೆ. ಜಾರ್ಜಿಯಾದಲ್ಲಿ ಇರುವ ಕಾರು ಉತ್ಪಾದನಾ ಘಟಕದಲ್ಲಿ ಸಣ್ಣ ಕಾರುಗಳ ಉತ್ಪಾದನೆಯನ್ನು ಪ್ರಾರಂಭಿಸಬೇಕು ಎಂದು ವಿಚಾರ ಮಾಡಿದ್ದೇವೆ. ಒಂದು ಪಕ್ಷ ಎಲ್ಲವೂ ಸರಿಯಾದಲ್ಲಿ ಜಾರ್ಜಿಯಾ ಕಾರು ಉತ್ಪಾದನಾ ಘಟಕದಲ್ಲಿ ಸಣ್ಣ ಕಾರುಗಳ ಉತ್ಪಾದನೆಯನ್ನು ಹುಂಡೈ ಕೈಗೆತ್ತಿಕೊಳ್ಳಲಿದ್ದು, ಅಮೆರಿಕದಲ್ಲಿರುವ ಉದ್ದಿಮೆಯು 2009ರಲ್ಲಿ ಕಾರ್ಯಾರಂಭ ಮಾಡಬಹುದು ಎಂದು ಹುಂಡೈ ಕಂಪನಿಯ ಉಪಾಧ್ಯಕ್ಷ ಕಿಮಾ ಡಾಂಗ್-ಜಿನ್ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಗಮನಾರ್ಹವಾಗಿ ಎರಿಕೆಯಾಗುತ್ತಿರುವುದರಿಂದ ಸಣ್ಣ ಕಾರುಗಳಿಗೆ ಬೇಡಿಕೆ ಕುದುರಿದೆ. ಅಲ್ಲದೇ ಪರಿಸರ ಸಂರಕ್ಷಣೆಯ ಸಮಸ್ಯೆಯೂ ಕೂಡ ದಿನದಿಂದ ದಿನಕ್ಕೆ ವಿಸ್ತಾರವಾಗುತ್ತ ಸಾಗುತ್ತಿರುವುದರಿಂದ ಕಡಿಮೆ ವಾತಾವರಣ ಕಲುಷಿತಗೊಳಿಸುವ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಬೇಕಾದ ಅನಿವಾರ್ಯತೆಯನ್ನು ಎಲ್ಲ ಕಂಪನಿಗಳು ಎದುರಿಸುತ್ತಿವೆ.
|