ಬುಧವಾರ ಮಧ್ಯ ರಾತ್ರಿಯಿಂದ ಜಾರಿಗೆ ಬರುವಂತೆ ಡೀಸೆಲ್ ಮತ್ತು ಪೆಟ್ರೋಲ್ ಬೆಲೆಗಳನ್ನು ಹೆಚ್ಚಿಸಿದೆ. ಡೀಸೆಲ್ ಬೆಲೆಯು ಶ್ರೀಲಂಕಾದ 20 ರೂಗಳ ಏರಿಕೆಯನ್ನು ಐಒಸಿ ಮಾಡಿದೆ.
ಕಳೆದ ಒಂದು ವಾರದ ಅವಧಿಯಲ್ಲಿ ಮೂರು ಬಾರಿ ಕಂಪನಿಯು ತೈಲ ಬೆಲೆಯಲ್ಲಿ ಎರಿಕೆ ಮಾಡಿದ್ದು, ಈ ಬಾರಿ 20 ರೂಗಳ ಎರಿಕೆಯನ್ನು ಮಾಡಿದ್ದು, ಕಳೆದ ರವಿವಾರ ಪ್ರತಿ ಲೀಟರಿ ಡೀಸೆಲ್‌ಗೆ ಹತ್ತು ರೂಗಳನ್ನು ಹೆಚ್ಚಳ ಮಾಡಲಾಗಿತ್ತು. ಸರಕಾರಿ ಸ್ವಾಮಿತ್ವದ ಸಿಲೋನ್ ಪೆಟ್ರೋಲಿಯಂ ಕಾರ್ಪೋರೆಷನ್ ಡೀಸೆಲ್ ಬೆಲೆಯನ್ನು ಏರಿಸಿದ ನಂತರ ಐಒಸಿ ದರ ಹೆಚ್ಚಳಕ್ಕೆ ಮುಂದಾಗಿದೆ ಎಂದು ವರದಿಯಾಗಿದೆ.
ಕಚ್ಚಾ ಇಂಧನ ತೈಲ ಬೆಲೆಯು ಬ್ಯಾರೆಲ್ ಒಂದಕ್ಕೆ 135 ಡಾಲರ್ ತಲುಪಿರುವ ಹಿನ್ನೆಲೆಯಲ್ಲ ಎಷಿಯಾದ ಪ್ರಮುಖ ದೇಶಗಳು ರಿಯಾಯಿತಿ ದರದಲ್ಲಿ ಮಾರಲಾಗುತ್ತಿರುವ ಇಂಧನದ ಬೆಲೆಗಳ ಹೆಚ್ಚಳಕ್ಕೆ ಆದ್ಯತೆ ನೀಡುತ್ತಿವೆ.
|