ಬಂಡವಾಳ ಹೂಡಿಕೆದಾರರು ಆತಂಕವನ್ನು ಎದುರಿಸುತ್ತಲೆ ಮಾರಾಟಕ್ಕೆ ಆದ್ಯತೆ ನೀಡಿದ ಕಾರಣ ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆಯು ಪ್ರತಿ ಹತ್ತು ಗ್ರಾಂಗೆ 430 ರೂಗಳು ಇಳಿಕೆಯನ್ನು ದಾಖಲಿಸಿದೆ. ಅಮೆರಿಕದಲ್ಲಿ ಚಿನ್ನದ ಬೆಲೆಯು ದಿಢೀರ್ ಕುಸಿತ ಅನುಭವಿಸಿದ ಕಾರಣ ಭಾರತೀಯ ಚಿನ್ನದ ಮಾರುಕಟ್ಟೆಯು ಕುಸಿತಕ್ಕೆ ಒಳಗಾಯಿತು. ಅಮೆರಿಕದಲ್ಲಿ ಕನ್ಸೂಮರ್ ಕಾನ್ಫಿಡೆನ್ಸ್ ಡಾಟಾ ಬಿಡುಗಡೆಯಾದ ನಂತರ ಚಿನ್ನದ ಬೆಲೆಯಲ್ಲಿ 18 ಡಾಲರುಗಳ ಇಳಿಕೆ ಕಂಡು ಬಂದಿದೆ.
ಪ್ರತಿ ಹತ್ತು ಗ್ರಾಂಗೆ ಪರಿಶುದ್ದ ಚಿನ್ನದ ಬೆಲೆಯಲ್ಲಿ 430 ರೂಗಳ ಇಳಿಕೆಯಾಗಿದ್ದು 12,600 ರೂಗಳಿಗೆ ತಲುಪಿದೆ ಆಭರಣ ಚಿನ್ನದ ಬೆಲೆಯು 12,450 ರೂಗಳಿಗೆ ಸ್ಥಿರಗೊಂಡಿದೆ. ಪ್ರತಿ ಸವರನ್ ಚಿನ್ನದ ಬೆಲೆಯಲ್ಲಿ 50 ರೂಗಳ ಇಳಿಕೆಯಾಗಿದ್ದು ಅದು ಪ್ರತಿ ಎಂಟು ಗ್ರಾಂಗೆ 10,000ಕ್ಕೆ ಸ್ಥಿರಗೊಂಡಿದೆ. ಬೆಳ್ಳಿಯ ವಹಿವಾಟಿನಲ್ಲಿಯೂ ಇದೇ ಪ್ರವೃತ್ತಿ ಕಂಡು ಬಂದಿದ್ದು, 23,800 ರೂಗಳಿಗೆ ಪ್ರತಿ ಕೆಜಿಯಂತೆ ಮಾರಾಟವಾಗುತ್ತಿದ್ದ ಬೆಳ್ಳಿಯ ಬೆಲೆಯಲ್ಲಿ 1,450 ರೂಗಳ ಇಳಿಕೆ ಕಂಡು ಬಂದಿದೆ. ವಾರದ ನಂತರ ಪೂರೈಕೆ ಪದ್ದತಿಯಲ್ಲಿ ಬೆಳ್ಳಿಯ ಬೆಲೆಯು ಪ್ರತಿ ಕೆಜಿಗೆ 24 ಸಾವಿರ ನಿಗದಿಯಾಗಿದ್ದು, 1360ರೂಗಳ ಇಳಿಕೆ ದಾಖಲಾಗಿದೆ.
|