ಟಾಟಾ ಮೊಟಾರ್ಸ್‌ನ ನೀರು ಸೋಸುವಿಕೆ ಘಟಕದಲ್ಲಿ ಕ್ಲೋರಿನ್ ಗ್ಯಾಸ್ ಸೋರಿಕೆಯಾದ ಹಿನ್ನೆಲೆಯಲ್ಲಿ ಉಸಿರಾಟ ತೊಂದರೆಗೆ ಒಳಗಾದ 180 ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಲಾದ ಪ್ರಕರಣ ಕುರಿತಂತೆ ಇಬ್ಬರು ಅಧಿಕಾರಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.
ಸುರಕ್ಷಾ ವಿಙಾಗದ ಉಪ ಪ್ರಧಾನ ವ್ಯವಸ್ಥಾಪಕ ಸಮೀರ್ ಕುಮಾರ್ ಘಾಟಕ್ ಮತ್ತು ನೀರು ಸಂಸ್ಕರಣ ವಿಭಾಗದ ಮುಖ್ಯಸ್ಥ ಬಿ.ಕೆ ಸರ್ಕಾರ್ ಅವರನ್ನು ಕರ್ತವ್ಯ ನಿರ್ಲಕ್ಷ್ಯ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಜಿಲ್ಲಾ ಎಸ್.ಪಿ ನವೀನ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಘಾಟಕ್ ಹಾಗೂ ಸರ್ಕಾರ್ ಸೇರಿದಂತೆ ಹತ್ತು ಮಂದಿ ಅಧಿಕಾರಿಗಳ ವಿರುದ್ದ ಟೆಲ್ಕೊ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 308, 338, 337, 278 and 284 ಐಪಿಸಿ.ಸೆಕ್ಷನ್‌ಗಳನ್ನು ಹಾಕಲಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ.
ನೀರು ಸೋಸುವಿಕೆ ಘಟಕದಲ್ಲಿ ಅನಿಲ ಸಿಲೆಂಡರ್‌ನಿಂದ ಕ್ಲೋರಿನ್ ಗ್ಯಾಸ್ ಸೋರಿಕೆಯಾದ ಹಿನ್ನೆಲೆಯಲ್ಲಿ ಉಸಿರಾಟ ತೊಂದರೆಗೆ ಒಳಗಾಗಿ ಸುಮಾರು 180 ಕಾರ್ಮಿಕರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿಸಿದ್ದಾರೆ.
ಮಧ್ಯಾಹ್ನದ ವೇಳೆಯಲ್ಲಿ ನೀರು ಸೋಸುವಿಕೆ ಘಟಕದಲ್ಲಿ ಅನಿಲ ಸಿಲೆಂಡರ್‌ನಿಂದ ಕ್ಲೋರಿನ್ ಗ್ಯಾಸ್ ಸೋರಿಕೆಯಾಗಿದೆ ಎಂದು ಕಂಪೆನಿಯ ಸಹಾಯಕ ಪ್ರಧಾನ ವ್ಯವಸ್ಥಾಪಕ ಕ್ಯಾಪ್ಟನ್ ಪಿ.ಜೆ .ಸಿಂಗ್ ತಿಳಿಸಿದ್ದಾರೆ.
ಟಾಟಾ ಮೊಟಾರ್ಸ್ ಪ್ರಕಟಣೆಯೊಂದನ್ನು ಹೊರಡಿಸಿ ಕ್ಲೋರಿನ್ ಗ್ಯಾಸ್ ಸೋರಿಕೆಯಿಂದ ತೊಂದರೆಗೊಳಗಾದವರನ್ನು ಟಾಟಾ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ತಿಳಿಸಿದೆ.
ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಅರ್ಜುನ್ ಮುಂಡಾ ಹಾಗೂ ಜೆಎಂಎಂ ಸಂಸತ್ ಸದಸ್ಯ ಸುಮನ್ ಮಹತೊ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಆರೋಗ್ಯವನ್ನು ವಿಚಾರಿಸಿದರೆಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
|