ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಅಧಿಕ ಬಡ್ಡಿದರ ಏರಿಕೆ ಸೂಕ್ತವಲ್ಲ'  Search similar articles
ಅಧಿಕ ಬಡ್ಡಿದರ ವ್ಯವಸ್ಥೆಯ ಕಡೆಗಿನ ಯಾವುದೇ ನಡೆಯು ಕೈಗಾರಿಕಾ ಬೆಳವಣಿಗೆ ಮೇಲೆ ಪರಿಣಾಮ ಬೀರಲಿದೆ ಎಂದು ಹಣಕಾಸು ಸಚಿವರ ಸಲಹೆಗಾರ ಶುಭಾಶಿಶ್ ಗಂಗೋಪಾದ್ಯಾಯ ಹೇಳಿದ್ದಾರೆ.

ಹಣದುಬ್ಬರವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್ ಹಣ ಸರಬರಾಜನ್ನು ಮತ್ತಷ್ಟು ಬಿಗಿಗೊಳಿಸುವ ಸಂಭವದ ಊಹಾಪೋಹಗಳ ಅವರ ಈ ಅಭಿಪ್ರಾಯ ಹೊರಬಿದ್ದಿದೆ.

ಆಹಾರ ಹಣದುಬ್ಬರಕ್ಕೆ ಜಾಗತಿಕ ಅಂಶದ ಬದಲು ದೇಶೀಯ ಕಾರಣವನ್ನು ಹೊಣೆಯಾಗಿಸಿದ ಅವರು, ಕೃಷಿ ಉತ್ಪನ್ನಗಳ ಚಲನೆಗೆ ಹಲವು ಅಡಚಣೆಗಳಿವೆ ಎಂದು ನುಡಿದರು. ಪಿಎಚ್‌ಡಿಸಿಸಿಐ ಚೇಂಬರ್ ಆಯೋಜಿಸಿದ್ದ ಚರ್ಚಾ ಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ಬಡ್ಡಿ ದರ ಏರಿಕೆಯ ಮೂಲಕ ಹಣದುಬ್ಬರ ನಿಯಂತ್ರಿಸುವುದು ಕೈಗಾರಿಕಾ ಕ್ಷೇತ್ರದ ಮೇಲೆ ದೀರ್ಘ ಕಾಲೀನ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ನುಡಿದರು.

ಗ್ರಾಮೀಣ ಆರ್ಥಿಕತೆ ಮೇಲೆ ಬಹುವಾಗಿ ಪ್ರಭಾವ ಹೊಂದಿರುವ ಆಹಾರ ಸಂಸ್ಕರಣೆಯಂತಹ ಕ್ಷೇತ್ರದ ಬಗ್ಗೆ ಮಾತನಾಡಿದ ಗಂಗೋಪಾದ್ಯಾಯ, ನಿಧಿಗಳು ಭಾರಿ ದುಬಾರಿಯಾಗಿರುವುದರಿಂದ ಈ ಕ್ಷೇತ್ರಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವುದನ್ನು ತಾವು ಇಚ್ಚಿಸುವುದಿಲ್ಲ ಎಂದು ಹೇಳಿದರು.
ಮತ್ತಷ್ಟು
ತೈಲ ಬೆಲೆ ಏರಿಕೆ ನಿರ್ಧಾರ ಮೇ.31ರೊಳಗೆ
ವಿಡೀಯೊಕಾನ್:60 ಬಿನ್‌ ವೆಚ್ಚದಲ್ಲಿ ವಿದ್ಯುತ್ ಯೋಜನೆ
ಅನಿಲ ಸೋರಿಕೆ: ಇಬ್ಬರು ಅಧಿಕಾರಿಗಳ ಬಂಧನ
ಏರ್‌ ಲೈನ್ಸ್‌ಗಳಿಂದ ಇ-ಟಿಕೆಟ್ ಜಾರಿ
ಜಾಗತಿಕ ಪ್ರಭಾವ ಇಳಿದ ಚಿನ್ನದ ಬೆಲೆ
ಹಣದುಬ್ಬರಕ್ಕೆ ಕಾರಣವಾಗಿರುವ ಮುಕ್ತ ಹಣಕಾಸು ನೀತಿ